ಬೆಂಗಳೂರು: ಅಂಬರೀಶ್ ಅವರ ಅಂತ್ಯ ಸಂಸ್ಕಾರದ ವೇಳೆ ನಟಿ ಮಾಜಿ ಸಂಸದೆ ಜಯಪ್ರದಾ ಅವರು ಡಿಸಿಪಿ ಅಣ್ಣಾಮಲೈ ಅವರ ವಿರುದ್ಧ ಗರಂ ಆದ ಘಟನೆ ನಿನ್ನೆ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರ ಅಂತ್ಯಕ್ರಿಯೆ ವೇಳೆ ಸುಮಾರು 15000 ದಷ್ಟು ಜನ ನೆರೆದಿದ್ದರು. ಸಾವಿರಾರು ಜನರು ಒಮ್ಮೆಲೇ ಹೋಗುವಾಗ ನೂಕು ನುಗ್ಗಲು ಉಂಟಾಗಿತ್ತು. ಆ ವೇಳೆ ಜಯಪ್ರದಾ ಅವರು ತಮ್ಮ ಕಾರಿನಿಂದ ಹೊರಬಂದಿದ್ದಾರೆ. ಆಗ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಜಯಪ್ರದಾ ಅವರಿಗೆ ಭದ್ರತೆಯ ದೃಷ್ಟಿಯಿಂದ ಕಾರಿನಲ್ಲೇ ಕೂರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಜಯಪ್ರದಾ ಅವರು ಡಿಸಿಪಿಯಾದರೆ ನಾನು ಮಾಜಿ ಸಂಸದೆ. ಎಲ್ಲದಕ್ಕೂ ಹೆಚ್ಚಾಗಿ ನಾನೊಬ್ಬ ಮಹಿಳೆ. ನನಗೆ ಬೆರಳು ತೋರಿಸಿ ಮಾತನಾಡಿದ್ದಾರೆ. ಭದ್ರತೆ ನೀಡುವುದು ಪೊಲೀಸರ ಕರ್ತವ್ಯ ಎಂದು ಅಣ್ಣಾಮಲೈಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.










