ಬೆಂಗಳೂರು: ಅಂಬರೀಷ್ ಅವರು ಅಗಲಿ ಇಂದಿಗೆ 11 ದಿನಗಳಾಗಿದ್ದು, ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಸಂಪ್ರದಾಯದಂತೆ ಅಂಬಿ ಸಮಾಧಿಗೆ ಹಾಲು, ತುಪ್ಪ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂಬಿ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್, ರಾಕ್‌ಲೈನ್ ವೆಂಕಟೇಶ್, ನಟ ದರ್ಶನ್, ಸೇರಿದಂತೆ ಹಲವು ಗಣ್ಯರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅಂಬಿ ಅಭಿಮಾನಿಗಳು ಪುಣ್ಯತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋ ಬಳಿ ಕೇಶ ಮುಂಡನೆ ಮಾಡಿಸಿಕೊಳ್ಳುತ್ತಿದ್ದಾರೆ.










