ಬೆಂಗಳೂರು:ಹಿರಿಯ ನಿರ್ದೇಶಕ ಎ.ಆರ್.ಬಾಬು ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎ.ಆರ್.ಬಾಬು ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಲ್ಲೆಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲೋ ಯಮ, ಸೇರಿದಂತೆ ಹಲವು ಚಿತ್ರಗಳನ್ನು ಎ.ಆರ್.ಬಾಬು ಅವರು ನಿರ್ದೇಶನ ಮಾಡಿದ್ದರು.
ಎ.ಆರ್.ಬಾಬು ಅವರ ನಿಧನಕ್ಕೆ ನಟ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದು ನನ್ನ ಆತ್ಮೀಯ ಸಹೋದರ ನಿರ್ದೇಶಕ ಎ.ಆರ್.ಬಾಬು ಅವರು ಯಾರದೋ ದುಡ್ಡು” ಕಾಸಿದ್ದವನೆ ಬಾಸ್” ನನ್ನೊಟಿಗೆ ಕಾರ್ಯಮಾಡಿದ್ದ..ನಿರ್ದೇಶಕ ಪ್ರೇಮ್ ನ ಪರಿಚಯಿಸಿದ ಮಹನೀಯ..ನಮ್ಮಿಬ್ಬರ ಗೆಳೆತನ 30ವರ್ಷದ್ದು..ನೋವಿನಿಂದ ವಿದಾಯ ಮಿತ್ರನಿಗೆ.. ಎಂದು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.











