ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಆರೋಗ್ಯ ವಿಚಾರಿಸಿದ ಸಿ.ಎಂ ಕುಮಾರಸ್ವಾಮಿ…

295
firstsuddi

ಬೆಂಗಳೂರು:  ಮೆಟ್ರೊ ರೈಲು ಹಳಿಗೆ ಯುವಕನೊಬ್ಬ ಹಾರಿ  ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದಿದ್ದು, ವೇಣು ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮೊಬೈಲ್​ ಹೆಚ್ಚಾಗಿ ಬಳಸಬೇಡ ಎಂದು ತಾಯಿ ಹೇಳಿದ್ದಕ್ಕೆ ವೇಣು ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನ ಆರೋಗ್ಯ ವಿಚಾರಿಸಿದರು.

ಮೆಟ್ರೋ ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ…

.