ಬೈಕ್-ಟ್ರ್ಯಾಕ್ಟರ್ ಡಿಕ್ಕಿ, ಯೋಧನ ದುರ್ಮರಣ…

210
firstsuddi

ಬೆಳಗಾವಿ: ಟ್ರಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ಯೋಧನೋರ್ವ  ಮೃತಪಟ್ಟಿರುವ ಘಟನೆ ನಾಗರಮುನ್ನೋಳಿ ಗ್ರಾಮದ ಸಮೀಪವಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.ನಾಗರಮುನ್ನೋಳಿ ಗ್ರಾಮದ  ನಿವಾಸಿ ಸಿಕಂದರ್ ಮುಲ್ತಾನಿ (28)  ಮೃತಪಟ್ಟ ಯೋಧ.  40 ದಿನ ರಜೆ ಪಡೆದು ಊರಿಗೆ ಬಂದಿದ್ದ ಸಿಕಂದರ್ ಮುಲ್ತಾನಿ ಅವರು  ಅಪಘಾತದಲ್ಲಿ  ಸಾವಿಗೀಡಾಗಿದ್ದು, ಪಂಜಾಬ್ ನಲ್ಲಿ ಒಂಬತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದ್ದು, ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.