ನವದೆಹಲಿ: ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದು, ರಾಜಪಥ್ನಲ್ಲಿ ಗಣರಾಜ್ಯೋತ್ಸವ ಪರೇಡ್ ಆರಂಭವಾಗಿದ್ದು, ಮೊದಲ ಬಾರಿಗೆ ಅಸ್ಸಾಂ ರೈಫಲ್ಸ್ನ ಆಲ್ ವುಮೆನ್ ಕಾಂಟಿಂಜೆಂಟ್ ರಾಜ್ಪಥ್ನಲ್ಲಿ ಪಥಸಂಚಲನ ಮಾಡಲಾಗಿದೆ. ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಚರಣೆಗೆ ಚಾಲನೆ ನೀಡಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಪಾಲ್ಗೊಂಡಿದ್ದಾರೆ. ವಿವಿಧ ಸ್ತಬ್ದಚಿತ್ರಗಳ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಲಾಗಿದ್ದು, ಈ ಬಾರಿ ಮಹಾತ್ಮಾ ಗಾಂಧೀಜಿ ಅವರ ನೆನಪುಗಳನ್ನು ಅನಾವರಣ ಮಾಡಲಾಗಿದೆ.










