ಚಿಕ್ಕಮಗಳೂರು: ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಉತ್ಸವ…

300
firstsuddi

ಚಿಕ್ಕಮಗಳೂರು: ನಗರದ ರಾಮನಹಳ್ಳಿ ಬಡಾವಣೆಯ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಶನೇಶ್ವರಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ನವಗ್ರಹ ಹೋಮ, ಗಣಪತಿ ಹೋಮ, ಕಲಾಹೋಮ ಮತ್ತು ಶನೇಶ್ವರ ಹೋಮ ನಡೆಯಿತು.
ಗಂಗಾ ಪೂಜೆ ಮತ್ತು ನೂರಾರು ಭಕ್ತರ ನಡುವೆ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು, ಮಯೂರಿ ಗಾನ, ಸುಗಮ ಸಂಗೀತ ತಂಡದಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.
ಮಧ್ಯಾಹ್ನ ಎ.ಬಿ.ಲೋಕೇಶ್ ತಂಡದಿಂದ ಶ್ರೀ ಶನೇಶ್ವರಸ್ವಾಮಿ ಅವರ ಕಥಾಕಾಲಕ್ಷೇಪ ನಡೆಯಿತು.