ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ನಳಂದ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಎಂ ದೇವಾಂಗ್ ಗೆ ಚಿನ್ನದ ಪದಕ…

1177
firstsuddi

ಮೈಸೂರು: ಚಾಮುಂಡಿ ವಿಹಾರ್ ಒಳಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ (2019)ಪಂದ್ಯಾವಳಿಯಲ್ಲಿ ಮೂಡಿಗೆರೆ IATM   DOJO  ಸೆನ್ ಸಾಯಿಗಳಾದ ರಾಜೇಂದ್ರನ್, ಲತಾಚಂದ್ರು ಇವರ ತರಬೇತಿಯಲ್ಲಿ ನಳಂದ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ  ಎಂ ದೇವಾಂಗ್ ಬ್ರೌನ್ ಬೆಲ್ಟ್ ವಿಭಾಗದಲ್ಲಿ ವೈಯಕ್ತಿಕ ಕಟಾದಲ್ಲಿ  ಚಿನ್ನದ ಪದಕ ಹಾಗೂ ವೆಪನ್ ಕಟಾದಲ್ಲಿ ಕಂಚಿನ ಪದಕವನ್ನು ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ಯೋಶಿ ನವೀನ್ , ಅರ್ಜುನ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಯೋಗೇಶ್ ಅವರು ಪ್ರಶಸ್ತಿ ವಿತರಿಸಿದರು . ಶ್ರೀಶಾ  ಎಂ ದೇವಾಂಗ್  ಅವರು ಸರ್ಕಾರಿ  ಪ್ರೌಢಶಾಲೆ ದಾರದಹಳ್ಳಿ ಆಂಗ್ಲಭಾಷಾ ಶಿಕ್ಷಕಿಯಾದ ಮೀನಾ ಸಿ ಜಿ ಇವರ ಪುತ್ರಿಯಾಗಿದ್ದಾರೆ .  ಫಸ್ಟ್ ಸುದ್ದಿ ಯೊಂದಿಗೆ ಮಾತನಾಡಿದ ನಳಂದ ಶಾಲೆಯ ಮುಖ್ಯಸ್ಥರಾದ ಸಾವಿತ್ರಿಯವರು ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದರು. ಆದರೆ ಈಗ ಎಲ್ಲಾ  ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿನಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾಳೆ  ಎಂದು ತಿಳಿಸಿದರು. ಈ ಸಂದರ್ಭದಲ್ಲಿ    ಆಡಳಿತ ಮಂಡಳಿಯ ಸುರೇಶ್,  ಗಣೇಶ್, ಇದ್ದರು.