ವರ್ಷಕ್ಕೆ 2 ಕೋಟಿ ಉದ್ಯೋಗವಿಲ್ಲ, ಹೊಸ ಉದ್ಯೋಗ ಸೃಷ್ಟಿಯ ಚಕಾರವಿಲ್ಲ,ಸಾಲ ಮನ್ನಾದ ಮಾತೇ ಇಲ್ಲ:ಕಾಂಗ್ರೆಸ್ ಟ್ವಿಟ್…

284
firstsuddi

ಬೆಂಗಳೂರು: ಕಾಂಗ್ರೆಸ್ ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,ಸಮ್ಮಿಶ್ರ ಸರ್ಕಾರವು 44 ಲಕ್ಷ ರೈತರ 46,000 ಕೋಟಿ ಸಾಲ ಮನ್ನಾ ಮಾಡಿದರೆ ಅದನ್ನು ಲಾಲಿಪಪ್ ಎನ್ನುತ್ತೀರಿ.ನಿಮ್ಮ ಹೊಸ ಯೋಜನೆಯಿಂದ ಕರ್ನಾಟಕದ 59 ಲಕ್ಷ ರೈತರಿಗೆ ಕೇವಲ  3528 ಕೋಟಿ ಸಿಗಬಹುದು.ರೈತ ಕುಟುಂಬಕ್ಕೆ ದಿನಕ್ಕೆ 17 ಕೊಟ್ಟು ಉಧ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ ನೀವು ರೈತ ಶತೃ ಅಲ್ಲವೇ?
ವರ್ಷಕ್ಕೆ 2 ಕೋಟಿ ಉದ್ಯೋಗವಿಲ್ಲ, ಹೊಸ ಉದ್ಯೋಗ ಸೃಷ್ಟಿಯ ಚಕಾರವಿಲ್ಲ,ರೈತರ ಆದಾಯ ದುಪ್ಪಟ್ಟು, ಸಾಲ ಮನ್ನಾದ ಮಾತೇ ಇಲ್ಲ.
ವೈಫಲ್ಯಗಳಿಂದ ಜನ ವಿಶ್ವಾಸ ಕಳೆದುಕೊಂಡಿರುವ ನಿಮ್ಮ ಸರ್ಕಾರವು ರೈತ ವಿರೋಧಿ, ಯುವಜನತೆಯ ವಿರೋಧಿಯಾಗಿದ್ದು, ದೇಶ ನೀವು ನಿರ್ಗಮಿಸುವುದನ್ನು ಎದುರು ನೋಡುತ್ತಿದೆ.
ಮಲ್ಯ, ನೀರವ್ ಮೋದಿ ಸೇರಿ 27 ಮಂದಿ ಆರ್ಥಿಕ ಅಪರಾಧಿಗಳು ದೇಶಕ್ಕೆ ಸಾವಿರಾರು ಕೋಟಿ ವಂಚಿಸಿ ಓಡಿಹೋಗಿದ್ದಾರೆ.8ಮಂದಿಗೆ ರೆಡ್ ಕಾರ್ನರ್ ನೋಟೀಸ್ ನೀಡಲಾಗಿದೆಯೆಂದು ನಿಮ್ಮ ಸರ್ಕಾರವೇ ಲೋಕಸಭೆಗೆ ಮಾಹಿತಿ ನೀಡಿದೆ. ಕಾವಲುಗಾರನೆಂದು ಹೇಳಿಕೊಳ್ಳುವವರು ಭ್ರಷ್ಟಾಚಾರದಲ್ಲಿ ಪಾಲುದಾರನಾಗಿರುವಾಗ ಅಪರಾಧಿಗಳನ್ನು ಹಿಡಿಯಲು ಸಾಧ್ಯವೆ?
2014-15ರ ವಿತ್ತ ಸಚಿವಾಲಯದ ಸಾಲದ ಮಾಹಿತಿಯಂತೆ 54,229 ಇದ್ದ ತಲಾ ಸಾಲ 2017-18 ರಲ್ಲಿ 73,966 ಆಗಿದೆ.ವಿಕಾಸದ ಹೆಸರಿನಲ್ಲಿ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದೇ ನಿಮ್ಮ ಸಾಧನೆ.ಸುಳ್ಳು ಭರವಸೆಗಳಿಂದಲೇ ಅಧಿಕಾರಕ್ಕೇರಿದ ದೇಶದ ಇತಿಹಾಸದಲ್ಲೇ ಅತ್ಯಂತ ಅಸಮರ್ಥ ಪ್ರಧಾನಿ ನೀವಲ್ಲವೆ?
ನರೇಂದ್ರ ಮೋದಿ ಅವರೆ,ಹಸಿವಿನ ದೇಶಗಳ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದ ಭಾರತವನ್ನು 103ಕ್ಕೆ ತಂದು ನಿಲ್ಲಿಸಿದ್ದೀರಿ.ಜನಸಾಮಾನ್ಯರ ಆರ್ಥಿಕ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ. ಶ್ರೀಮಂತರ ಪರ ಕೆಲಸ ಮಾಡಿದ ಸೂಟು ಬೂಟಿನ ಸರ್ಕಾರದಿಂದ ಬಡವರ ಸ್ಥಿತಿ ಸುಧಾರಿಸಿಲ್ಲ. ನೀವು ನಿರ್ಗಮಿಸುವುದನ್ನು ದೇಶ ಎದುರು ನೋಡುತ್ತಿದೆ.
ಮಹದಾಯಿ ವಿಷಯದಲ್ಲಿ 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರಕ್ಕೆ ಯತ್ನಿಸದೆ ಕರ್ನಾಟಕಕ್ಕೆ ದ್ರೋಹವೆಸಗಿದ್ದಾರೆ, ಐಐಟಿ ಉದ್ಘಾಟನೆಗೆ ಶಿಷ್ಟಾಚಾರದ ಪ್ರಕಾರ ಕರ್ನಾಟಕ ಸಿಎಂನನ್ನು ಆಹ್ವಾನಿಸದೆ ಕರ್ನಾಟಕವನ್ನು ಅವಮಾನಿಸಲಾಗಿದೆಯೆಂದು ಹುಬ್ಬಳ್ಳಿ ಕಾಂಗ್ರೆಸ್ ಕಾರ್ಯಕರ್ತರು ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟನೆ ನಡೆಸಿದರು. 
ಕರ್ನಾಟಕದ ಜನತೆ ನಿಮ್ಮನ್ನು ಸಾಮಾಜಿಕ ಜಾಲತಾಣದ ಮುಖಾಂತರ ಜ್ವಲಂತ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ.ಭ್ರಷ್ಟಾಚಾರ, ವೈಫಲ್ಯ, ಸುಳ್ಳು ಭರವಸೆಗಳು, ಯಾಮಾರಿಸುವ ತಂತ್ರಗಾರಿಕೆ, ಕರ್ನಾಟಕಕ್ಕೆ ಮಾಡಿದ ಮೋಸ.. ಬಗ್ಗೆ ಪ್ರಶ್ನಿಸಿದ್ದಾರೆ.
ಯಾವ ಪ್ರಶ್ನೆಗೂ ಉತ್ತರಿಸಲು ನಿಮ್ಮ 56″ಎದೆ ಧೈರ್ಯ ನೀಡಲಿಲ್ಲವೆ?
ನಿಮಗೂ ಸತ್ಯಕ್ಕೂ ಹೊಂದಾಣಿಕೆ ಆಗೋದೇ ಇಲ್ಲವೆ?ನಿಮ್ಮ ಬಾಯಿಂದ ಸತ್ಯ ಮತ್ತು ವಾಸ್ತವತೆ ಹೊರಡುವುದೇ ಇಲ್ಲವೆ?ಕರ್ನಾಟಕ ಸಮ್ಮಿಶ್ರ ಅಸಹಾಯಕರಲ್ಲ ಸರ್ಕಾರವೂ ಅಸಹಾಯಕವಲ್ಲ.ಬಿಜೆಪಿಯ ಬಿಎಸ್ವೈ ಮತ್ತು ತಂಡ ಮಾತ್ರ ಅಸಹನೆ, ಅಸತ್ಯ, ಅಧರ್ಮದ ದಾರಿಯಲ್ಲಿದೆ.ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಬಗ್ಗೆ ಚಕಾರವೆತ್ತಲಿಲ್ಲವೇಕೆ? ಎಂದು ಟ್ವಿಟ್ ಮೂಲಕ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.