ಮೂಡಿಗೆರೆ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹಾಗೂ ಭಾರತ್ ಅಯಿಲ್, ಹಿಂದುಸ್ತಾನ್ ಆಯಿಲ್, ಕಂಪನಿಯ ಕೆಲವು ಪೆಟ್ರೋಲ್ ಪಂಪ್‍ಗಳು ನಿರಂತರವಾಗಿ ಎಗ್ಗಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದು, ಈ ಪೆಟ್ರೋಲ್‍ಪಂಪ್ ಮಾಲೀಕರು ಇಂಧನವನ್ನು ತುಂಬಿಸುವುದನ್ನು ಬಿಟ್ಟರೆ ಗ್ರಾಹಕರಿಗೆ ಸಿಗುವ ಕೆಲವು ಮೂಲಭೂತ ಕನಿಷ್ಠ ಸೌಲಭ್ಯಗಳಾದ ಮತ್ತು ನಿರ್ಬಂಧಕ್ಕೊಳಗಾದ ಗ್ರಾಹಕರಿಗೆ ಸಿಗುವ ‘ಉಚಿತ ಗಾಳಿ, ಉಚಿತ ಶೌಚಾಲಯ, ಕುಡಿಯಲು ಶುದ್ದ ನೀರು ಇದ್ಯಾವುದನ್ನು ಒದಗಿಸದೇ ಗ್ರಾಹಕರಿಗೆ ವಂಚಿಸಿ ಕಂಪನಿ ಹಾಗೂ ಕೇಂದ್ರ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದೆ.
ಕೇವಲ ಹೆಸರಿಗೆ ಮಾತ್ರ ಉಚಿತವಾಗಿ ಗಾಳಿ, ನೀರು, ಶೌಚಾಲಯದ, ನಾಮಫಲಕವನ್ನು ಹಾಕಿದ್ದು ಗ್ರಾಹಕರು ಅದರ ಬಳಕೆಗೆ ಹೋದರೆ ನಿರಾಶರಾಗಿ ಬರುವುದಲ್ಲದೇ ಅದನ್ನು ಮಾಲೀಕರಲ್ಲಿ ಕೇಳಿದರೆ ಇದು ದುರಸ್ಥಿಯಲ್ಲಿ ಇರುತ್ತದೆ. ಅದು ಕಂಪನಿಯ ನಿರ್ವಹಣೆಯಾಗಿರುತ್ತದೆ ಮತ್ತು ಶೌಚಾಲಯದಲ್ಲಿ ನೀರು ಸರಬರಾಜು ಇರುವುದಿಲ್ಲ. ಎಂದೆಲ್ಲಾ ಪೊಳ್ಳು ಮಾಹಿತಿಯನ್ನು ನೀಡಿ ಗ್ರಾಹಕರಿಗಿರುವ ಸೌಲಭ್ಯವನ್ನು ಪೆಟ್ರೋಲ್ ಪಂಪ್‍ನಲ್ಲಿ ಇರುವ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಇದನ್ನು ಬಳಸಲು ಅವರು ಅದಕ್ಕೆ ಬೀಗ ಮುದ್ರೆಯನ್ನು ಬಳಸಿ ಗ್ರಾಹಕರಿಗೆ ನಿತ್ಯ ವಂಚಿಸುತ್ತಿದ್ದು ಇದರಿಂದ ಹೊರಗಿನಿಂದ ಬರುವಂತಹ ಪ್ರವಾಸಿಗರಿಗೆ ಮತ್ತು ವಾಹನ ಸವಾರರಿಗೆ ನಿತ್ಯ ಕಿರಿ ಕಿರಿ ತಪ್ಪಿದ್ದಲ್ಲ.
ಕೇಂದ್ರ ಸರ್ಕಾರವು ಮತ್ತು ಜಿಲ್ಲಾ ಅಡಳಿತ ಹಾಗು ಇಂದನ ಸಂಸ್ಥೆಗಳು ನೂತನವಾಗಿ ಪೆಟ್ರೋಲ್ ಪಂಪನ್ನು ಆರಂಭಿಸಲು ಪರವಾನಿಗೆ ಮಾಡಿಸುವ ಸಂದರ್ಭದಲ್ಲಿ ಹಾಗೂ ಈಗಾಗಲೇ ಕಾರ್ಯಚರಿಸುತ್ತಿರುವ ಅದರ ಮಾಲೀಕರಿಗೆ ಕೆಲವು ನಿರ್ಬಂಧಗಳನ್ನು ಹಾಕಿದ್ದು ಅದನ್ನು ಅವರು ಚಾಚು ತಪ್ಪದಂತೆ ಪಾಲಿಸಬೇಕು ಮತ್ತು ಅವರ ಪರವಾನಿಗೆ ನವೀಕರಣದ ಸಂದರ್ಭದಲ್ಲಿ ಇಂತಹ ಮಹತ್ವರ ವಿಷಯವನ್ನು ಹೆಚ್ಚಾಗಿ ಪರಿಗಣಿಸಿದ್ದು ಇಂತಹ ಸೂಕ್ಷ್ಮವಾದ ವಿಷಯವನ್ನು ಇಲ್ಲಿರುವಂತಹ ಪೆಟ್ರೋಲ್ ಪಂಪ್ ಮಾಲೀಕರು ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದು ಗ್ರಾಹಕರ ಅಸಮಧಾನಕ್ಕೆ ಕಾರಣವಾಗಿದೆ.
ಸ್ವಚ್ಚ ಭಾರತ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಪಂಪ್ ಗೆ ಬರುವಂತಹ ಗ್ರಾಹಕರಿಗೆ ಅವರಿಗೆ ಬೇಕಾದಂತಹ ಮೂಲಭೂತ ಸೌಲಭ್ಯಕ್ಕಾಗಿ ದಿನನಿತ್ಯ ವಿವಿಧ ಯೋಜನೆಗಳನ್ನು ಪರಿಚಯಿಸುವುದಕ್ಕಾಗಿ ಜಾಹಿರಾತು ನೀಡುತ್ತಿದ್ದು ಮತ್ತು ನೂತನವಾಗಿ ಶೌಚಾಲಯವನ್ನು ಆಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡಲು ಮತ್ತು ಇದರ ನಿರ್ವಹಣೆಗೆ ಬೇಕಾದಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ .ಆದರೆ ಇಲ್ಲಿ ಕಾರ್ಯನಿರ್ವಹಿಸುವಂತಹ ಕೆಲವು ಪೆಟ್ರೋಲ್ ಪಂಪುಗಳಾದಂತಹ ಗಂಗನಮಕ್ಕಿ, ಹ್ಯಾಂಡ್‍ಪೋಸ್ಟ್, ಹಾಗೂ ಕೆಎಸ್ಆರ್ ಟಿಸಿ ಬಸ್ ಸ್ಟಾಂಡ್ ಸಮೀಪವಿರುವ ಪೆಟ್ರೋಲ್ ಪಂಪ್, ಹಾಗೂ ಎಂ.ಜಿ.ಎಂ ಆಸ್ಪತ್ರೆ ಸಮೀಪ ಇರುವಂತಹ ಪೆಟ್ರೋಲ್ ಪಂಪ್‍ಗಳಲ್ಲಿ ಒಂದಿದ್ದರೆ ಒಂದಿಲ್ಲ ಎಂಬ ಉತ್ತರವಲ್ಲದೇ ಗ್ರಾಹಕರಿಗೆ ಅನುಕೂಲವಾಗುವಂತಹ ಯಾವುದೇ ಸೌಲಭ್ಯವನ್ನು ಒದಗಿಸಲು ಇಲ್ಲಿರುವ ಪೆಟ್ರೋಲ್ ಪಂಪ್ ಮಾಲೀಕರು ಹಿಂಜರಿಯುತ್ತಿರುವುದು ವಿಪರ್ಯಾಸವೇ ಸರಿ. ಕೇವಲ ಲಾಭಕ್ಕಾಗಿ ನಡೆಸುವ ಇಂತಹ ಪೆಟ್ರೋಲ್ ಪಂಪ್ ಮಾಲೀಕರನ್ನು ಸಂಬಂಧಿಸಿದ ಅಧಿಕಾರಿಗಳು ಇಂತವರ ವಿರುದ್ದ ಸೂಕ್ತ ಎಚ್ಚರಿಕೆ ನೀಡುವುದಲ್ಲದೇ ಪರವಾನಿಗೆ ರದ್ದುಗೊಳಿಸಿದಲ್ಲಿ ಇದರಿಂದ ಎಚ್ಚೆತ್ತುಕೊಂಡು ಬಂಕಿನ ಮಾಲೀಕರು ಗ್ರಾಹಕರ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುವಲ್ಲಿ ಸಫಲರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.










