ಚಿಕ್ಕಮಗಳೂರು:ಫೆ.15 ರಂದು ಶ್ರೀರಾಮನಾಮ ಲಿಪಿಯನ್ನು ಬರೆಯುತ್ತಿರುವ ಶ್ರೀ ಪ್ರಸನ್ನ ಲೇಖಕ ಸೀತಾರಾಮಾಂಜನೇಯಸ್ವಾಮಿಯ ಅಪರೂಪದ ವಿಗ್ರಹದ ಪ್ರತಿಷ್ಠಾಪನೆ…

1209
firstsuddi

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ. ಶ್ರೀರಾಮನಾಮ ಲಿಪಿಯನ್ನು ಬರೆಯುತ್ತಿರುವ ಶ್ರೀ ಪ್ರಸನ್ನ ಲೇಖಕ ಸೀತಾರಾಮಾಂಜನೇಯಸ್ವಾಮಿಯ ಅಪರೂಪದ ವಿಗ್ರಹದ ಪ್ರತಿಷ್ಠಾಪನೆ ಫೆ.15 ರಂದು ನಡೆಯಲಿದೆ.
ಪ್ರತಿಷ್ಠಾಪನೆ ಅಂಗವಾಗಿ 13 ರಂದು ಸಂಜೆ 5 ಗಂಟೆಗೆ ಭಗವತ್ಪ್ರಾರ್ಥನೆ ಪರಿಷತ್ಪ್ರಾರ್ಥನೆ, ಸ್ವಸ್ತಿವಾಚನ, ಸಂಕಲ್ಪ, ಋತ್ವಿಗ್ವರಣೆ, ವಿಶ್ವಕ್ಸೇನಾರಾಧನೆ, ಪುಣ್ಯಾಹವಾಚನ, ರಕ್ಷಾಬಂಧನ, ಮೃತ್ಸಂಗ್ರಹಣ, ದ್ವಾರಧ್ವಜ ಕುಂಭಾರಾಧನೆ, ಅಂಕುರಾರ್ಪಣೆ, ದೀಪಾರೋಹಣ, ವಾಸ್ತು ರಾಕ್ಷೋಘ್ನ ಹೋಮ, ಪರ್ಯಗ್ನಿಕರಣ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಬಲಿಹರಣ, ಜಲಾಧಿವಾಸ ಜರುಗಲಿದೆ.
14 ರಂದು ಬೆಳಿಗ್ಗೆ ವೇದ ಪ್ರಬಂಧ ಪಾರಾಯಣ, ಮಂಟಪ ವಿಮಾನ ಪ್ರತಿಷ್ಠೆ, ನಯನೋನ್ಮಿಲನ, ಸಪ್ತದಶಕಲಶ ಸ್ನಪನ, ಮೃತ್ತಿಕಾ ಸ್ನಪನ, ಮೂರ್ತಿ ಕುಂಭ ಮತ್ತು ತಳ ಕುಂಭಾರಾಧನೆ, ಪ್ರಧಾನ ಪರಿವಾರ ದೇವತಾ ಹೋಮ, ಕಳಾ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಸಂಜೆ ವಿಷ್ಣುಸಹಸ್ರ ನಾಮ, ಸಂಕ್ಷಿಪ್ತ ರಾಮಾಯಣ, ಹನುಮಾನ್ ಚಾಲೀಸ್ ಪಾರಾಯಣ, ಕಲಶಾರಾಧನೆ, ಮಹಾಸುದರ್ಶನ ಹೋಮ ನಡೆಯಲಿದೆ.
15 ರಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, ವೇದಪ್ರಬಂಧ ಪಾರಾಯಣ, ಪೀಠ ಪೂಜೆ, ಶ್ರೀ ಪಸನ್ನ ಲೇಖಕ ಸೀತಾರಾಮಾಂಜನೇಯ ಸ್ವಾಮಿಯ ಅಷ್ಟಬಂಧ ಪೂರ್ವಕ ಸ್ಥಿರಬಿಂಬ ಪ್ರತಿಷ್ಠೆ, ಪ್ರಾಣಪ್ರತಿಷ್ಠಾಪನೆ, ಜೀವಾಧಿತತ್ವನ್ಯಾಸ ಹೋಮ, ಶ್ರೀರಾಮತಾರಕ ಹೋಮ, ಪವಮಾನ ಸೂಕ್ತ್ತಹೋಮ, ಕುಂಭಾಬಿಷೇಕ ಜರುಗಲಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದ್ದಾರೆ.