ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಮಲ್ಲಂದೂರು ಪೊಲೀಸರು ಯಶಸ್ವಿ…

673
firstsuddi

ಚಿಕ್ಕಮಗಳೂರು: ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು  ಬಂಧಿಸುವಲ್ಲಿ ಚಿಕ್ಕಮಗಳೂರಿನ ಮಲ್ಲಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಲಿಮನೆ  ವಾಸಿ ಜೋಸೆಫ್ ಡಿಸೋಜಾ ಬಂಧಿತ ಆರೋಪಿ. ಬಂಧಿತ ಆರೋಪಿ ಕಳೆದ ವಾರ ಮಲ್ಲಂದೂರು ಸಮೀಪದ ಮೈಲಿಮನೆ ಗ್ರಾಮದ ಅನಿಲ್ ಎಂಬುವರ ಮನೆಯಲ್ಲಿದ್ದ 48 ಗ್ರಾಂ ಚಿನ್ನಾಭರಣ ಮತ್ತು 30,000 ರೂ. ನಗದು ಹಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 1.31 ಲಕ್ಷ ಮೌಲ್ಯದ 48.110 ಗ್ರಾಂ ಚಿನ್ನ, 30 ನಗದು ಹಣ ವಶಪಡಿಸಿಕೊಂಡಿದ್ದಾರೆ.