ಆಪರೇಷನ್ ಕಮಲ ಮಾಡಲು ಹೋಗಿ ತಮ್ಮ ಪಕ್ಷಕ್ಕೇ ಆಪರೇಷನ್ ಆಗುವ ಸ್ಥಿತಿ ಬಿಜೆಪಿಗೆ ಬಂದಿರುವುದು ಶೋಚನೀಯ:ಡಾ.ಜಿ ಪರಮೇಶ್ವರ್…

287
firstsuddi

ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದು , ಪ್ರತಿ ಬಾರಿಯೂ ಆಪರೇಷನ್ ಕಮಲ ಮಾಡಲು ಹೋಗಿ ತಮ್ಮ ಪಕ್ಷಕ್ಕೇ ಆಪರೇಷನ್ ಆಗುವ ಸ್ಥಿತಿ ಬಿಜೆಪಿಗೆ ಬಂದಿರುವುದು ಶೋಚನೀಯ. ರಾಜಕೀಯದಲ್ಲಿ ಒಂದಷ್ಟು ನೈತಿಕತೆ‌ ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ರಾಜಕೀಯದ ಮೇಲೆ ಜಿಗುಪ್ಸೆ ಹುಟ್ಟಬಹುದು.‌ ಈಗಲಾದರೂ ಬಿಜೆಪಿ ಬುದ್ಧಿ ಕಲಿತು ಆಪರೇಷನ್ ಮಾಡುವುದನ್ನು ಬಿಟ್ಟು ಪ್ರತಿಪಕ್ಷವಾಗಿ ಕೆಲಸ ನಿಭಾಯಿಸಲಿ ಎಂದು ಟ್ವಿಟ್ ಮಾಡಿದ್ದಾರೆ.