ಬೆಂಗಳೂರು: ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದ್ದು, ನರೇಂದ್ರ ಮೋದಿಯವರೇ, ಭಯೋತ್ಪಾದನೆ ಮಟ್ಟ ಹಾಕುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರಿ, ಆದರೆ, 2014 ರಿಂದ ಒಟ್ಟು1708 ಭಯೋತ್ಪಾದಕ ಘಟನೆಗಳು ನಡೆದಿವೆ. ಅಂದರೆ ಪ್ರತಿ ತಿಂಗಳು ಸರಾಸರಿ 15 ದಾಳಿಗಳು. 2018 ರಲ್ಲಿ ಇದು ಶೇ 260% ಹೆಚ್ಚಿದೆ. ಭಯೋತ್ಪಾದನೆ ನಿಗ್ರಹಿಸುವಲ್ಲಿ ನಿಮ್ಮ ವಿಫಲತೆಯನ್ನು ಒಪ್ಪಿಕೊಳ್ಳುವಿರಾ?
ನರೇಂದ್ರ ಮೋದಿ ಯವರೆ, ನಿಮ್ಮ ಸಚಿವರೇ ನೀಡಿದ ಮಾಹಿತಿಯಂತೆ, 2014 ರಿಂದ ಇದುವರೆಗೂ 390ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಇದು ಯು.ಪಿ.ಎ ಅವಧಿಯ ಸೈನಿಕರ ಸಾವಿನ ಪ್ರಮಾಣಕ್ಕಿಂತ ಶೇ. 93% ರಷ್ಟು ಹೆಚ್ಚಳ. ಸೈನ್ಯ, ಸೈನಿಕರ ಶೌರ್ಯವನ್ನು ಭಾವನಾತ್ಮಕವಾಗಿ ಬಳಸಿಕೊಂಡು ಅಧಿಕಾರಕ್ಕೇರಿದ ನೀವು ಮಾಡಿದ ಬದಲಾವಣೆಯೇನು?
ನರೇಂದ್ರ ಮೋದಿಯವರಿಂದ, ಮಹದಾಯಿ ವಿವಾದ, ಕಾವೇರಿ ವಿವಾದ, ಬರಪರಿಹಾರ, ಕೊಡಗು ಜಲಪ್ರಳಯ ನಿರ್ವಹಣೆ ಎಲ್ಲದರಲ್ಲಿಯೂ ಮೋಸ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡದೆ ಮೋಸ. ಹೆಚ್.ಎ.ಎಲ್ ಗೆ ರಫೇಲ್ ಪಾಲುದಾರಿಕೆ ನೀಡದೆ ಮೋಸ. ಬೆಂಗಳೂರಿಗೆ ಸಬರ್ಬನ್ ರೈಲು ನೀಡದೆ ಮೋಸ ಎಂದು ಕಾಂಗ್ರೆಸ್ ಟ್ಟಿಟ್ ಮಾಡಿದೆ.













