ಸುಮಲತಾ ಅಂಬರೀಷ್ ಅವರನ್ನು ಮಂಡ್ಯದ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಡಿ.ಸಿ ತಮ್ಮಣ್ಣ…

114
firstsuddi

ಮಂಡ್ಯ: ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಸುಮಲತಾ ಅಂಬರೀಷ್ ಅವರನ್ನು ಮಂಡ್ಯದ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು. ಸುಮಲತಾ ಅವರನ್ನು ಜೆಡಿಎಸ್ ವರಿಷ್ಠರ ಜೊತೆ ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಆದರೆ ಅಂಬಿ ಕುಟುಂಬದ ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು. ಸಂಧಾನಕ್ಕೆ ನಾನು ಮತ್ತು ನನ್ನ ಮಗ ಸಕಲ ಪ್ರಯತ್ನ ಮಾಡಿದೆವು. ಆದರೆ ಸಂಧಾನಕ್ಕೆ ಸುಮಲತಾ ಅವರು ಒಪ್ಪಲಿಲ್ಲ.  ಕುಮಾರಸ್ವಾಮಿಯನ್ನು ಸುಮಲತಾ ಅವರು ಭೇಟಿ ಮಾಡಿ ನಾನೇ ಅಭ್ಯರ್ಥಿ ಆಗುತ್ತೀನಿ ಟಿಕೆಟ್ ಕೊಡಿ ಎಂದು ಕೇಳಬೇಕಿತ್ತು ಎಂದಿದ್ದಾರೆ.