ಚಿಕ್ಕಮಗಳೂರು : ಬೈಕಿನಲ್ಲಿ ತೆರಳುತ್ತಿದ್ದ ದಂಪತಿಗೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಲಕ್ಷ್ಮೀ (48) ಸಾವನ್ನಪ್ಪಿರುವ ಘಟನೆ ನಗರದ ಶೃಂಗಾರ್ ಸರ್ಕಲ್ ಬಳಿ ನಡೆದಿದ್ದು, ಬೈಕಿಗೆ ಡಿಕ್ಕಿಯಾದ ಪರಿಣಾಮ ಮಹಿಳೆ ಬೈಕಿನಿಂದ ಕೆಳಗೆ ಬಿದ್ದಿದ್ದು, ಮಹಿಳೆ ಮೇಲೆ ಟಿಪ್ಪರ್ ಹರಿದು ಹೋಗಿದ್ದು, ಬೈಕ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆಂಚಾಂಬ ಕಂಪನಿಗೆ ಸೇರಿದ ಟಿಪ್ಪರ್ ಲಾರಿ ಎನ್ನಲಾಗಿದ್ದು, ಚಾಲಕನನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










