ಚಿತ್ರದುರ್ಗ : ಕನ್ನಡದಲ್ಲೇ ಯುಗಾದಿ ಶುಭಾಷಯ ಕೋರಿದ ಪ್ರಧಾನಿ ನರೇಂದ್ರ ಮೋದಿ…

186
firstsuddi

ಚಿತ್ರದುರ್ಗ : ಲೋಕಸಭಾ ಚುನಾವಣಾ ಹಿನ್ನೆಲೆ ಇಂದು ಚಿತ್ರದುರ್ಗದಲ್ಲಿ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣದ ಆರಂಭದಲ್ಲೇ ಭಾರತ್ ಮಾತಾ ಕೀ ಜೈ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಕ್ಷೇತ್ರದ ಆತ್ಮೀಯ ಬಂಧುಗಳೇ ನಿಮಗೆಲ್ಲರಿಗೂ ನಿಮ್ಮ ಚೌಕಿದಾರ ನರೇಂದ್ರ ಮೋದಿಯ ನಮಸ್ಕಾರಗಳು. 2ದಿನದ ಹಿಂದೆ ನಾವೆಲ್ಲ ಯುಗಾದಿ ಹಬ್ಬವನ್ನು ಆಚರಿಸಿದೆವು. ಕರ್ನಾಟಕದ ಸಮಸ್ತ ಕನ್ನಡ ಬಂಧುಗಳಿಗೆ ಯುಗಾದಿ ಹಬ್ಬದ ಶುಭಾಷಯಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಇತ್ತೀಚೆಗೆ ನಡೆದ ಏರ್ ಸ್ಟ್ರೈಕ್ ನಿಂದಾಗಿ ಪಾಕಿಸ್ತಾನಕ್ಕೆ ನೋವಾಗಿದೆಯೋ ಇಲ್ವೋ ಗೊತ್ತಿಲ್ಲ ಆದರೆ ಇಲ್ಲಿಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ತುಂಬಾ ನೋವಾಗಿದೆ. ಇಡೀ ಜಗತ್ತು ನಮ್ಮ ಸೇನೆಯನ್ನು ಹೊಗಳಿದ್ರೆ ಇಲ್ಲಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಸೇನೆ ನಡೆಸಿದ ಏರ್ ಸ್ಟ್ರೈಕ್ ವಿರೋಧ ಮಾಡುತ್ತಿವೆ. ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜ್ಯದಲ್ಲಿ ಸಾಲಮನ್ನಾ ಮಾಡುವಂತೆ ಭರವಸೆ ನೀಡಿದ್ದರು. ಆದರೆ ಸಾಲಮನ್ನಾ ಮಾಡುವುದರ ಬದಲು ಪ್ರತಿಯೊಬ್ಬ ರೈತರಿಗೂ ಕೋರ್ಟ್‍ನಿಂದ ನೋಟೀಸ್ ಬರುವ ಹಾಗೆ ಮಾಡಿದ್ದಾರೆ. ರೈತರಿಗೆ ಒಳ್ಳೆದು ಮಾಡುವ ಮನಸ್ಸು ಕಾಂಗ್ರೆಸ್‍ನವರಿಗೆ ಇಲ್ಲ. ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು, ಉದ್ಯೋಗ ಸೃಷ್ಟಿಸಲು ನಾನು ಬದ್ಧನಾಗಿದ್ದೇನೆ. ಕಾಂಗ್ರೆಸ್ ನಾಲ್ಕು ತಲೆಮಾರಿನಿಂದ ತನ್ನ ಆಡಳಿತಾವಧಿಯಲ್ಲಿ ದೇಶದ ಜನತೆಗೆ ಮೋಸ ಮಾಡಿಕೊಂಡು ಬರುತ್ತಿದೆ ಎಂದರು.