ಮಂಡ್ಯ : ಚುನಾವಣಾ ಪ್ರಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜೆಡಿಎಸ್‍ನವರು ನನ್ನ ಕಡೆಯವರಿಗೆ ಹಣದ ಆಮಿಷ ಒಡ್ಡಿದ್ದು, ನಾನು ಇದನ್ನು ಐದು ದಿನದಲ್ಲಿ ವಿಚಾರಣೆ ಮಾಡಿ ಬಹಿರಂಗ ಪಡಿಸುತ್ತೇನೆ. ನನ್ನನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಅವರು ಹೇಳುತ್ತಿದ್ದಾರೆ. ನನಗೆ ರೈತ ಸಂಘದವರೂ ಕೂಡಾ ಬೆಂಬಲ ನೀಡಿದ್ದಾರೆ. ಆದರೆ ನಾನು ಮಂಡ್ಯ ಜನರ ಬೆಂಬಲಿತ ಅಭ್ಯರ್ಥಿ. ಬೇರೆ ಯಾರಾ ಟೀಕೆಗಳ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಿನ್ನೆ ಮೈಸೂರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಂಬರೀಶ್ ಅವರ ಸಾಧನೆಗಳನ್ನು ಗುರುತಿಸಿ ಅಂಬರೀಶ್ ಹಾಗೂ ನನ್ನ ಹೆಸರನ್ನು ಪ್ರಸ್ತಾಪಿಸಿರುವುದು ನನಗೆ ಆಶ್ಚರ್ಯವಾಗಿದೆ. ಇದಕ್ಕೆ ನಾನು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ.










