ಚಿಕ್ಕಮಗಳೂರು : ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಕುವೆಂಪು ವಿದ್ಯಾನಿಕೇತನ ಶಾಲೆ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾ ಬೇಸಿಗೆ ಶಿಬಿರವು ನಗರದ ಜಿಲ್ಲಾ ಸುಭಾಷ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ಶಿಬಿರದಲ್ಲಿ ದೈಹಿಕ ವ್ಯಾಯಾಮಗಳು, ಓಟಗಳು, ಯೋಗ, ಈಜು, ಕಬಡ್ಡಿ, ಖೋ-ಖೋ, ವಾಲಿಬಾಲ್, ಕ್ರಿಕೇಟ್ ಆಟಗಳ ಮೂಲ ಕೌಶಲ್ಯಗಳು ಹಾಗೂ ಮನೋರಂಜನ ಆಟಗಳು ಜೊತೆಗೆ ಪೌಷ್ಠಿಕಯುಕ್ತ ಹಾಲುಮೊಟ್ಟೆ ಹಣ್ಣುಗಳನ್ನು ನೀಡುವ ಮೂಲಕ ಮಕ್ಕಳಿಗೆ ಕ್ರೀಡೆಯ ಹಾಗೂ ಆರೋಗ್ಯದ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಲಾಯಿತು.
ಶಿಬಿರಕ್ಕೆ ಯುವಜನ ಸೇವಾ ಮತ್ತು ಯುವಸಬಲೀಕರಣ ಕ್ರೀಡಾ ಇಲಾಖೆಯವರು ಉತ್ತಮ ಸಹಕಾರ ನೀಡಿದ್ದು, ಈ ಆಟೋಟ ಶಿಬಿರಕ್ಕೆ ತರಬೇತುದಾರರಾಗಿ ಮಂಜುನಾಥ್, ಮನೋಹರ್, ಚಂದ್ರ, ಮಧುಕುಮಾರ್, ನಿಂಗಪ್ಪ ತರಬೇತಿ ನೀಡಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಕುವೆಂಪು ವಿದ್ಯಾನಿಕೇತನ ಶಾಲೆ ವತಿಯಿಂದ ಬೇಸಿಗೆ ಶಿಬಿರ










