ರಮೇಶ್ ಜಾರಕೀಹೊಳಿ ಅವರ ರಾಜೀನಾಮೆ ವಿಷಯವನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ : ಡಾ. ಜಿ. ಪರಮೇಶ್ವರ್…

223
firstsuddi

ಬೆಳಗಾವಿ : ನಾಮಪತ್ರ ಹಿಂಪಡೆಯಲು ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕೆ.ಎನ್. ರಾಜಣ್ಣ ಅವರು 3.5 ಕೋಟಿ ಹಣ ಪಡೆದುಕೊಂಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಆಡಿಯೋದಲ್ಲಿ ಮಾತನಾಡಿರುವ ದರ್ಶನ್ ಚುನಾವಣೆ ಪ್ರಚಾರದಲ್ಲಿ ನನ್ನ ಜತೆ ಇದ್ದರು. ಅವರು ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆಡಿಯೋ ವೈರಲ್ ಮಾಡಿ ಆರೋಪಿಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ರಮೇಶ್ ಜಾರಕೀಹೊಳಿ ಅವರ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ರಮೇಶ್ ಜಾರಕೀಹೊಳಿ ಅವರ ರಾಜೀನಾಮೆ ವಿಷಯವನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ರಾಜೀನಾಮೆ ಬಗ್ಗೆ ಬಹಳ ದಿನದಿಂದ ನಾವು ಕೇಳುತ್ತಿದ್ದೇವೆ. ರಮೇಶ್ ಅವರ ರಾಜೀನಾಮೆಯ ಬಳಿಕ ನಾವು ಏನು ಕ್ರಮಕೈಗೊಳ್ಳಬೇಕು ಎಂದು ಯೋಚಿಸುತ್ತಿದ್ದೇವೆ. ರಮೇಶ್ ಅವರು ರಾಜೀನಾಮೆ ನೀಡದೆ ಪಕ್ಷದಲ್ಲೇ ಉಳಿದರೆ ಅವರಿಗೆ ಯಾವ ಹುದ್ದೆ ನೀಡಬೇಕು ಎಂಬುವುದನ್ನು ಯೋಚಿಸುತ್ತಿದ್ದೇವೆ ಎಂದು ಹೇಳಿದರು.