ಕಳಸ : ಸ್ಥಳಿಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು ಇಲ್ಲಿಯ ಹಲವಾರು ಸಮಸ್ಯೆಗಳ ಬಗ್ಗೆ ಸಂಸದೆ ಶೋಭ ಕರಂದ್ಲಾಜೆಯ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೇವೆ ಎಂದು ಕಳಸ ಹೋಬಳಿ ಬಿಜೆಪಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ ತಿಳಿಸಿದ್ದಾರೆ.
ಪಕ್ಷದ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ ವಿದಾನ ಸಭೆ ಚುನಾವಣೆಯಲ್ಲಿಯೂ 3990 ಮತಗಳ ಹೆಚ್ಚಿನ ಲೀಡ್ ಕೊಟ್ಟಿದ್ದೇವು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟಿದ್ದೇವೆ. ಇಲ್ಲಿ ಕಾಂಗ್ರೇಸ್,ಜೆಡಿಎಸ್,ಸಿಪಿಐ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ ಕೂಡ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಕಳೆದ ಬಾರಿ ಇಲ್ಲಿಯ 33 ಮತಗಟ್ಟೆಯ ಪೈಕಿ 26 ಮತಗಟ್ಟೆಯಲ್ಲಿ ಬಿಜೆಪಿ ಹೆಚ್ಚಿನ ಮತಗಳು ಬಿದ್ದಿದ್ದವು ಆದರೆ ಈ ಬಾರಿ 31 ಮತಗಟ್ಟೆಗಳಲ್ಲಿ ಹೆಚ್ಚಿನ ಮತಗಳು ಬಿಜೆಪಿಗೆ ಬಿದ್ದಿವೆ ಎಂದು ಹೇಳಿದ ಅವರು ಈ ಭಾಗದ ಅಡಕೆ,ಕಾಫಿ,ಕಾಳುಮೆಣಸು ಬೆಳೆಗಾರರ ಹಲವಾರು ಸಮಸ್ಯೆಗಳ ಜೊತೆ ಇನ್ನಿತರೆ ಹಲವಾರು ಸಮಸ್ಯೆಗಳಿವೆ ಅದನ್ನು ಸಂಸದರ ಗಮನಕ್ಕೆ ತಂದು ಇಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದರು ಮತ್ತು ಶಾಸಕರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಅಲ್ಲದೆ ಸಂಸದರು ಈಗಾಗಲೇ ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುವ ಬಗ್ಗೆ ನೂ ಸೂಚಿಸಿದ್ದಾರೆ. ಈ ಭಾಗದಲ್ಲಿ ಅತೀ ಹೆಚ್ಚಿನ ಮತಗಳು ಬೀಳುವಲ್ಲಿ ಕಾರ್ಯಕರ್ತರ ಶ್ರಮ ಹೆಚ್ಚಿನದ್ದಾಗಿದೆ. ಮತ ನೀಡಿದ ಮತದಾರರಿಗೂ,ಕಾರ್ಯಕರ್ತರಿಗೂ ಕೃತಜ್ಞತೆ ತಿಳಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಕಾಯದರ್ಶಿಗಳಾದ ಜಯಂತ್,ರಂಗನಾಥ್ ಮುಖಂಡರಾದ ಕಾರ್ತಿಕ್ ಶಾಸ್ತ್ರೀ,ಶಂಕರೇಗೌಡ ಇತರ ಕಾರ್ಯಕರ್ತರು ಇದ್ದರು.










