ಕಳಸ : ಕಳಸ ಹೋಬಳಿಯ ಕೆಲವೆಡೆ ಇಂದು ಸಂಜೆ ಉತ್ತಮವಾಗಿ ಮಳೆ ಸುರಿದಿದ್ದು,
ಶುಕ್ರವಾರ ರಾತ್ರಿ ಕೂಡ ಮಳೆ ಸುರಿದು ಹವಮಾನವನ್ನು ತಂಪಾಗಿರಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಂಜೆಯಾಗುತ್ತಲೇ ಮಳೆ ಸುರಿಯುತ್ತಿದ್ದು, ಮಳೆಯ ಸುಳಿವಿಲ್ಲದೆ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದ ಜನತೆ ಸ್ವಲ್ಪ ಮಟ್ಟಿಗೆ ನಿರಾಳತೆ ಕಾಣುತ್ತಿದ್ದಾರೆ.
ಕಳೆದ ಬಾರಿ ಎಪ್ರಿಲ್ ತಿಂಗಳಿನಿಂದಲೇ ಬೇಸಿಗೆ ಮಳೆ ಆರಂಭವಾಗಿ ಕೃಷಿಕರಿಗೆ ಅನುಕೂಲವಾಗಿತ್ತು.ಆದರೆ ಈ ಬಾರಿ ಮಳೆಯ ಸುಳಿವಿಲ್ಲದೆ ನೀರಿನ ಸಮಸ್ಯೆಯನ್ನು ಎದುರಿಸಿದ್ದರು.
ಮಳೆಯಿಂದ ಪಟ್ಟಣದಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಛತ್ರಿ ಇಲ್ಲದೆ ಪೇಟೆ ಕಡೆ ಬಂದವರು ಕೆಲ ಕಾಲ ಅಂಗಡಿ ಮುಂಗಟ್ಟು, ಪ್ರಯಾಣಿಕರ ತಂಗುದಾಣವನ್ನು ಆಶ್ರಯಿಸುವಂತಾಯಿತು. ಬೈಕ್ ಸವಾರರು ಸಮಸ್ಯೆಯನ್ನು ಅನುಭವಿಸಿದರು.










