ಮೋದಿ ಸಂಪುಟದಲ್ಲಿ ರಾಜ್ಯದ ಮೂವರು ಸಚಿವರಿಗೆ ಖಾತೆ ಹಂಚಿಕೆ…

218
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸಂಪುಟದಲ್ಲಿ ಇಂದು ಸಚಿವ ಸಂಪುಟದ ಖಾತೆಗಳು ಹಂಚಿಕೆಯಾಗಿದ್ದು, ಕರ್ನಾಟಕದ ಡಿ.ವಿ ಸದಾನಂದ ಗೌಡ ಅವರಿಗೆ ರಸಗೊಬ್ಬರ ಖಾತೆಯನ್ನು ನೀಡಲಾಗಿದೆ. ಸುರೇಶ ಅಂಗಡಿ ಅವರಿಗೆ ರಾಜ್ಯ ರೈಲ್ವೇ ಖಾತೆಯನ್ನು ನೀಡಿದ್ದು, ಪ್ರಹ್ಲಾದ್ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆಯನ್ನು ನೀಡಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಗಿದೆ.