ಮೂಡಿಗೆರೆ: ಕೊನೆಗೂ ಕನ್ನಡ ನಾಮಫಲಕವನ್ನಾಕಿಸಿದ ಬಿ.ಜಿ.ಎಸ್ ಖಾಸಗಿ-ಶಾಲೆ, ಇದು ಫಸ್ಟ್ ಸುದ್ದಿ ಇಂಪ್ಯಾಕ್ಟ್…

362
firstsuddi

ಮೂಡಿಗೆರೆ: ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಾಲೆಯಲ್ಲೊಂದಾದ ಬಿ.ಜಿ.ಎಸ್. ಶಾಲೆಯಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬಂತಹ ದೂರಿನ ಮೇರೆಗೆ ಕನ್ನಡಪರ ಹಿರಿಯ ಹೋರಾಟಗಾರರಾದ ಹೊರಟ್ಟಿ ರಘುರವರು ವಿಚಾರದ ಕುರಿತು ಶಾಲೆಯ ಆಡಳಿತ ಮಂಡಳಿಯ ವಿರುದ್ದ ಆಕ್ರೋಶಗೊಂಡು ಕನ್ನಡ ನಾಮಫಲಕವನ್ನು ಹಾಕಿಸುವ ಕುರಿತು ಫಸ್ಟ್ ಸುದ್ದಿಯೊಂದಿಗೆ ಹೇಳಿಕೆ ನೀಡಿ ಕನ್ನಡದ ನಾಮಪಲಕವನ್ನು ಹಾಕಿಸಲು ಒತ್ತಾಯ ಮಾಡಿದಲ್ಲದೇ ಕನ್ನಡ ನಾಮಫಲಕವನ್ನುಆದಷ್ಟು ಬೇಗ ಹಾಕದಿದ್ದರೆ ಎಲ್ಲಾ ಕನ್ನಡ ಪರ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ ಮತ್ತು ಇಂತಹ ಸೂಕ್ಷ್ಮವಾದ ವಿಷಯವು ಕನ್ನಡ ನಾಡಿನ ಭಾಷೆ ನೆಲ ಜಲ ಸಂರಕ್ಷಣೆಯ ವಿಚಾರಗಳಲ್ಲಿ ಖಾಸಗಿ ಶಾಲೆಗಳು ಅನುಸರಿಸುತ್ತಿರುವ ರೀತಿ ಕನ್ನಡ ನಾಡಿಗೆ ಬಗೆಯುವ ಬಹು ದೊಡ್ಡ ದ್ರೋಹವಾಗಿದೆ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದರು.
ವಿಚಾರದ ಕುರಿತು ಕೆಲವು ದಿನಗಳ ಹಿಂದೆ ಫಸ್ಟ್ ಸುದ್ದಿ ನ್ಯೂಸ್ ಸಂಬಂಧಿಸಿದ ವಿಷಯದ ಅಡಕದೊಂದಿಗೆ ವಿಸ್ತೃತವಾಗಿ ಸುದ್ದಿಯನ್ನು ಮಾಡಿದ್ದು ಇದರಿಂದ ಎಚ್ಚೆತ್ತ ಬಿ.ಜಿ.ಎಸ್. ಶಾಲಾ ಆಡಳಿತ ಮಂಡಳಿಯು ಕನ್ನಡ ನಾಮಪಲಕವನ್ನು ಹಾಕಿಸುವ ಭರವಸೆಯನ್ನು ಈ ಹಿಂದೆಯೇ ನೀಡಿದಂತೆ ಇದರ ಮುಂದುವರಿದ ಭಾಗವಾಗಿ ಶಾಲೆಯ ಮುಂಭಾಗದಲ್ಲಿ ಕನ್ನಡದ ನಾಮಪಲಕವನ್ನು ಹಾಕಿಸಿ ಕನ್ನಡದ ಹಿರಿಮೆಯನ್ನು ಮೆರೆದಿದ್ದು ಇದು ಫಸ್ಟ್ ಸುದ್ದಿ ನ್ಯೂಸ್ ಪ್ರಭಾವವಾಗಿದೆ. ಹಾಗೆಯೇ ಕನ್ನಡದ ಬಗ್ಗೆ ಯಾರೆ ಅಪಮಾನ ಮಾಡಿ ಈ ನಾಡಿನ ಭಾಷೆ ನೆಲ ಜಲ ಇದರ ಬಗ್ಗೆ ದಕ್ಕೆ ಬರುವ ಕೆಲಸಕ್ಕೆ ಕೈಹಾಕಿದರೆ ಕನ್ನಡ ಪರ ಸಂಘಟನೆಗಳ ನ್ಯಾಯಸಮ್ಮತ ಹೋರಾಟಕ್ಕೆ ಫಸ್ಟ್ ಸುದ್ದಿ ಬಳಗವು ಅವರ ಜೊತೆ ಕೈಜೋಡಿಸಿ ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತದೆ. ಇದೇ ರೀತಿ ಇತರೇ ಖಾಸಗಿ ಶಾಲೆಗಳು ಕನ್ನಡವನ್ನು ಪಠ್ಯ ವಿಷಯಕ್ಕೆ ಸೀಮಿತಗೊಳಿಸದೇ ಇತರೇ ಚಟುವಟಿಕೆಗಳಲ್ಲಿ ಕನ್ನಡವನ್ನು ಬಳಸಬೇಕು ಆದರೆ ಖಾಸಗಿ ಶಾಲೆಯಲ್ಲಿ ಕನ್ನಡ ಪಠ್ಯಕ್ರಮವು ದ್ವಿತೀಯ ಭಾಷೆಯಾದರೂ ಕನ್ನಡವನ್ನು ನಮ್ಮ ದಿನನಿತ್ಯ ಚಟುವಟಿಕೆಗಳಲ್ಲಿ ಬಳಸಿದ್ದಲ್ಲಿ ಈ ನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ಸುಲಭವಾಗಿ ಅರ್ಥಪೂರ್ಣವಾಗಿ ತಿಳಿಸಲು ಸಹಕಾರಿಯಾಗುತ್ತದೆ ಈನಿಟ್ಟಿನಲ್ಲಿ ಎಲ್ಲರೂ ಕನ್ನಡವನ್ನು ಪ್ರೋತ್ಸಹಿಸಬೇಕಾಗಿದೆ.