ಕಳಸ ಪಟ್ಟಣದಲ್ಲಿ ಸಡಗರ,ಸಂಭ್ರಮದಿಂದ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಿದರು.

265

ಕಳಸ: ತಾಲ್ಲೂಕಿನಾಧ್ಯಂತ ಮುಸ್ಲಿಮರು ಸಡಗರ,ಸಂಭ್ರಮದಿಂದ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಿದರು.
ಪಟ್ಟಣದ ಮಸೀದಿಯಲ್ಲಿ ಮುಸ್ಲಿಮರು ಈದ್ ನಮಾಜ್ ಮಾಡಿದರು.ದಫನ ಭೂಮಿಗೆ ತೆರಳಿ ಅಗಲಿದವರಿಗೆ ಪ್ರಾಥನೆ ಸಲ್ಲಿಸಿದರು.ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಬ್ರಮಿಸಿದರು.ಮಕ್ಕಳು ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮ ನೆಂಟರಿಷ್ಟರ ಮನೆಗೆ ಹೋಗಿ ಹಬ್ಬದಲ್ಲಿ ಪಾಲ್ಗೊಂಡರು.ಮದ್ಯಾಹ್ನದ ಬೋಜನಕ್ಕೆ ಅನ್ಯ ಧರ್ಮಿಯದವರನ್ನು ಕರೆದು ಒಟ್ಟಿಗೆ ಬೋಜನವನ್ನು ಸ್ವೀಕರಿಸಿ ಕೋಮು ಸೌಹರ್ದತೆಯನ್ನು ಕಾಪಾಡಿದರು.