ಮೂಡಿಗೆರೆ :ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನ ವತಿಯಿಂದ ಜುಲೈ 14 ಕ್ಕೆ ಕವಿಗೋಷ್ಟಿ ಮತ್ತು ವಿಚಾರಗೋಷ್ಟಿಗೆ ಆಹ್ವಾನ…

611

ಮೂಡಿಗೆರೆ:ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನ ಮತ್ತು ಸಹಮತ ಚಿಕ್ಕಮಗಳೂರು ವತಿಯಿಂದ ಜುಲೈ 14 ರಂದು ಕೊಟ್ಟಿಗೆಹಾರದ ಕವಿಗೋಷ್ಟಿ ಮತ್ತು ವಿಚಾರಗೋಷ್ಟಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವವರು ಹೆಸರು ನೊಂದಾಯಿಸಲು ಕೋರಲಾಗಿದೆ.ಜುಲೈ 14 ರಂದು ಪ್ರಕೃತಿ ಪುರುಷ ಮತ್ತು ಕಾವ್ಯ ವಿಷಯದ ಬಗ್ಗೆ ಗೋಷ್ಟಿ ನಡೆಯಲಿದ್ದು ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಪುರುಷ ವಿಷಯದ ಬಗ್ಗೆ ಕುವೆಂಪು ವಿಶ್ವವಿದ್ಯಾಲಯದ ಪ್ರೋ ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆ. ಕುವೆಂಪು ಕಾವ್ಯದಲ್ಲಿ ಪ್ರಕೃತಿ ಪುರುಷ ಎಂಬ ವಿಷಯದ ಬಗ್ಗೆ ಲೇಖಕಿ ಎಲ್.ಸಿ ಸುಮಿತ್ರಾ ಮಾತನಾಡಲಿದ್ದಾರೆ.
ಮದ್ಯಾಹ್ನದ ನಂತರ ಕವಿಗೋಷ್ಟಿ ನಡೆಯಲಿದ್ದು ಖ್ಯಾತ ಸಾಹಿತಿ ಮೂಡ್ನಾಕೋಡು ಚಿನ್ನಸ್ವಾಮಿ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು ಕವಿಗೋಷ್ಟಿಯಲ್ಲಿ ಭಾಗವಹಿಸುವ ಕವಿಗಳು ಪ್ರಕೃತಿ ಪುರುಷ ವಿಷಯದ ಕುರಿತು ಕವಿತೆ ವಾಚಿಸಬೇಕಾಗಿದ್ದು ಕವಿಗೋಷ್ಟಿಯಲ್ಲಿ ಭಾಗವಹಿಸುವ ಕವಿಗಳು ಜೂನ್ ತಿಂಗಳ 30 ರೊಳಗಾಗಿ ಹೆಸರು ನೊಂದಾಯಿಸಬಹುದಾಗಿದೆ. ಕವಿಗೋಷ್ಟಿಯಲ್ಲಿ ಭಾಗವಹಿಸುವ ಕವಿಗಳು ಮೊಬೈಲ್ ಸಂಖ್ಯೆ 9448073330, 9663098873, 9980953426 ಕರೆ ಮಾಡಿ ಹೆಸರು ನೊಂದಾಯಿಸಬಹುದು ಎಂದು ಸಹಮತ ಚಿಕ್ಕಮಗಳೂರು ಸಂಚಾಲಕ ಐವಾನ್ ಡಿಸಿಲ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.