ಮೂಡಿಗೆರೆ : ಚಾರ್ಮಡಿ ಘಾಟ್‍ನಲ್ಲಿ ರಸ್ತೆ ಮೇಲೆ ಬಿದ್ದಿರುವ ಮರಗಳು… ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸಾರ್ವಜನಿಕರ ಆಕ್ರೋಶ.

406
firstsuddi

ಮೂಡಿಗೆರೆ :   ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಚಾರ್ಮಡಿ ಘಾಟ್ ಸೋಮನಕಾಡು ಬಳಿ ಐದಾರು ಕಡೆ ರಸ್ತೆಗಳ ಮೇಲೆ ಮರಗಳು ಸಾಲು ಸಾಲಾಗಿ ಬಿದ್ದಿದ್ದು, ಮಂಜು ಕವಿದ ವಾತಾವರಣವಿದ್ದು, ವಾಹನ ಸವಾರರು ರಸ್ತೆ ಕಾಣದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗ್ಗೆ ಗೊತ್ತಿದ್ದರೂ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿರುವುದು ಸ್ಥಳೀಯರ ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.