ಉಗ್ರರನ್ನು ಪೋಷಿಸುವವರನ್ನು ಎಲ್ಲಾ ದೇಶಗಳು ಕಡೆಗಣಿಸಬೇಕು : ನರೇಂದ್ರ ಮೋದಿ…

197
firstsuddi

ಅಫ್ಘಾನಿಸ್ತಾನ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಕಿರ್ಗಿಸ್ತಾನದ ಬಿಷ್ಕೆಕ್‍ನಲ್ಲಿ ನಡೆಯುತ್ತಿರುವ ಎಸ್‍ಸಿಒ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಎಸ್‍ಸಿಒ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸುವ ಅವಶ್ಯಕತೆ ಇದೆ. ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಸ್ಥಾಪಿಸಬೇಕಾಗಿದ್ದು, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಿಂದಾಗಿ ಮುಗ್ಧರು ಬಲಿಯಾಗುತ್ತಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಂದಾಗಬೇಕಿದೆ. ಉಗ್ರರನ್ನು ಪೋಷಿಸುವವರನ್ನು ಎಲ್ಲಾ ದೇಶಗಳು ಕಡೆಗಣಿಸಬೇಕು. ಉಗ್ರ ಪೋಷಕ ರಾಷ್ಟ್ರಗಳನ್ನು ಪಟ್ಟಿ ಮಾಡಿ ಅವುಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಉಗ್ರ ನೆಲೆಗಳನ್ನು ನಾಶಪಡಿಸುವಲ್ಲಿ ಎಲ್ಲಾ ದೇಶಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.