ಹಾಸನ- ಅಚ್ಚರಿ ರೀತಿಯಲ್ಲಿ ಬದುಕಿ ಬಂದ ಮೃತಪಟ್ಟಿದ್ದ ವ್ಯಕ್ತಿ…

565
firstsuddi
firstsuddi

ಹಾಸನ : ಶವಸಂಸ್ಕಾರ ಮಾಡಿ ಆರಾಧನೆ ಮಾಡಿದ ಎರಡು ದಿನದ ಬಳಿಕ ಅಚ್ಚರಿ ರೀತಿಯಲ್ಲಿ ಮೃತಪಟ್ಟಿರುವ ವ್ಯಕ್ತಿ ಬದುಕಿ ಬಂದ ಘಟನೆ ಜಿಲ್ಲೆಯ ಶಂಖ ಗ್ರಾಮದಲ್ಲಿ ನಡೆದಿದೆ. ಶಿವಣ್ಣ ಎಂಬುವವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ನಾಪತ್ತೆಯಾಗಿದ್ದರು. ನಾಪತ್ತೆಯಾದ ಎರಡು ದಿನಗಳ ಬಳಿಕ ಜೂನ್ 18ರಂದು ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕಾಣೆಯಾದ ಶಿವಣ್ಣನನ್ನೇ ಹೋಲುತ್ತಿದ್ದ ಮೃತದೇಹವನ್ನು ಶಿವಣ್ಣ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದು, ಇದೀಗ ದಿಢೀರ್ ಪ್ರತ್ಯಕ್ಷಗೊಂಡ ಶಿವಣ್ಣನನ್ನು ನೋಡಿ ಕುಟುಂಬಸ್ಥರಲ್ಲಿ ಸಂಭ್ರಮ ಮನೆಮಾಡಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.