ವಿಶ್ವಕಪ್ ಪಂದ್ಯದಿಂದ ವಿಜಯ್ ಶಂಕರ್ ಔಟ್, ಕನ್ನಡಿಗ ಮಯಾಂಕ್ ಅಗರ್ವಾಲ್ ಗೆ ಅವಕಾಶ ಸಾಧ್ಯತೆ…

400
firstsuddi

ನವದೆಹಲಿ : ಟೀಂ ಇಂಡಿಯಾದ ಆಲ್‍ರೌಂಡರ್ ಆಟಗಾರ ವಿಜಯ್ ಶಂಕರ್ ಅವರು ವಿಶ್ವಕಪ್ ಪಂದ್ಯದಿಂದಲೇ ಹೊರಬಿದ್ದಿದ್ದು, ಅಭ್ಯಾಸ ಪಂದ್ಯದ ವೇಳೆ ಬೂಮ್ರಾ ಅವರ ಬೌಲಿಂಗ್‍ನಲ್ಲಿ ವಿಜಯ್ ಶಂಕರ್ ಅವರ ಕಾಲಿಗೆ ಪೆಟ್ಟಾಗಿದ್ದು, 3ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ವಿಜಯ್ ಶಂಕರ್ ಅವರು ವಿಶ್ವಕಪ್ ಪಂದ್ಯದಿಂದಲೇ ಹೊರಬಿದ್ದಿದ್ದು, ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.