ಚಿಕ್ಕಮಗಳೂರು : 50 ಅಡಿ ಬಂಡೆ ಮೇಲಿಂದ ಗಂಡಾನೆ ಬಿದ್ದು ಸಾವು…

778
firstsuddi

ಚಿಕ್ಕಮಗಳೂರು : ಸುಮಾರು 50 ಅಡಿ ಬಂಡೆ ಮೇಲಿಂದ ಬಿದ್ದು 45 ವರ್ಷದ ಗಂಡಾನೆ ಸಾವನ್ನಪ್ಪಿರುವ ಘಟನೆ ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಗ್ರಾಮದಲ್ಲಿ ನಡೆದಿದೆ. ಭದ್ರಾ ವನ್ಯಜೀವಿ ಅರಣ್ಯದಿಂದ ಹೊರಬಂದು ಎರಡು ಆನೆಗಳು ಒಂದು ವಾರದಿಂದ ಕಾಫಿ ತೋಟದಲ್ಲಿ ಬೆಳೆ ಹಾಳು ಮಾಡುತ್ತಿದ್ದು, ವಿಷಯ ತಿಳಿದು ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಓಡಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಕೆಲಹೊತ್ತು ಗಂಭೀರವಾದ ಗಾಯಗಳಿಂದ ನಿತ್ರಾಣಗೊಂಡು ಆನೆ ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.