ಮೂಡಿಗೆರೆ : ಕಳಸ-ಕೊಟ್ಟಿಗೆಹಾರ ಸಂಚಾರ ಬಂದ್, ವಾಹನ ಸವಾರರ ಪರದಾಟ…

596
firstsuddi

ಮೂಡಿಗೆರೆ : ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ತಾಲ್ಲೂಕಿನ ಕೆಳಗೂರು ಸಮೀಪದ ಮಲ್ಲೆಮನೆ ಬಳಿ ನಡೆದಿದ್ದು, ರಸ್ತೆಗೆ ಅಡ್ಡವಾಗಿ ಬಿದ್ದ ಮರದಿಂದ ಸುಮಾರು 2ಗಂಟೆ ಸಂಚಾರ ಬಂದ್ ಆಗಿದ್ದು, ಹೊರನಾಡು, ಕಳಸ ಹೋಗುವ ಪ್ರವಾಸಿಗರು ಪರದಾಡುವಂತಾಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಮರ ತೆರವುಗೊಳಿಸಿದರು.