ಉತ್ತರ ಪ್ರದೇಶ : ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪತಿ ಪತ್ನಿಯನ್ನು ಕೊಂದು ಬಳಿಕ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ. ಮೆಹನಾಝ್ (21) ಕೊಲೆಯಾದ ಪತ್ನಿ ಎನ್ನಲಾಗಿದ್ದು, ಪತಿ ಹಸನ್ ಎಂಬುವವರು ಕಳೆದ ಒಂದು ವರ್ಷದ ಹಿಂದೆ ಮೆಹನಾಝ್ ಅವರನ್ನು ವಿವಾಹವಾಗಿದ್ದು, ಹಸನ್ ಗುಜರಾತಿನ ಸೂರತ್‍ನಲ್ಲಿ ಕೆಲಸ ಮಾಡುತ್ತಿದ್ದು, 2 ದಿನಗಳ ಹಿಂದೆ ಮನೆಗೆ ಬಂದಿದ್ದರು. ಈ ವೇಳೆ ಬೆಳಗ್ಗಿನ ಜಾವ ಸೆಕ್ಸ್ ಮಾಡಲು ಪತ್ನಿಯನ್ನು ಕೇಳಿಕೊಂಡಿದ್ದು, ಪತ್ನಿ ನಿರಾಕರಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಪತಿ ಪತ್ನಿಯನ್ನು ಕೊಂದು ತನ್ನ ಜನನಾಂಗವನ್ನು ಕತ್ತರಿಸಿಕೊಂಡಿದ್ದಾನೆ. ಪತ್ನಿಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ನೋಡಿದಾಗ ಮೆಹನಾಝ್ ಅವರ ಮೃತ ದೇಹ ನೆಲದ ಮೇಲೆ ಬಿದ್ದಿದ್ದು, ಹಸನ್ ಅವರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಹಸನ್ ಅವರನ್ನು ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು ಹಸನ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










