20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದ ಭಾರತೀಯ ಸೇನೆ…

413
firstsuddi

ಶ್ರೀನಗರ : ಭಾರತೀಯ ಸೇನೆ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದ್ದು, ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿದ್ದಾರೆ. 1999 ಮೇ 3 ರಿಂದ ಜುಲೈ 26 ರವರೆಗೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಖಲುಬಾರ್ ನ ಬಟಾಲಿಕ್ ಭಾಗದಲ್ಲಿ ಬಹಳ ಕಷ್ಟಕರವಾದ ಯುದ್ಧ ನಡೆದಿತ್ತು. ಗೋರ್ಖಾ ರೈಫೆಲ್ಸ್ ನ ಸೈನಿಕರು ಕಷ್ಟಕರವಾದ ಪ್ರದೇಶದ ಮೂಲಕ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ಪಾಕಿಸ್ತಾನ ಸೈನಿಕರು ಭಾರತೀಯ ಸೈನಿಕರೆಡೆಗೆ ದಾಳಿ ನಡೆಸಿದ್ದು, ಈ ವೇಳೆ ಗೋರ್ಖಾ ರೈಫೆಲ್ಸ್ ನ ಸೈನಿಕರು ಸಮರ್ಪಕವಾಗಿ ದಾಳಿ ನಡೆಸಿ ಶತ್ರು ರಾಷ್ಟ್ರವನ್ನು ಹೊಡೆದೋಡಿಸುವಲ್ಲಿ ಯಶಸ್ವಿಯಾದರು. ಕಾರ್ಗಿಲ್ ವಿಜಯಕ್ಕೆ ಕಾರಣರಾದ ಗೋರ್ಖಾ ರೈಫೆಲ್ಸ್ ನ ಸೈನಿಕ ಯೋಗೇಂದ್ರ ಸಿಂಗ್ ಯಾಧವ್ ಅವರಿಗೆ ಪರಮ ವೀರಚಕ್ರ ಪ್ರಶಸ್ತಿ ಹಾಗೂ ಇನ್ನೂ ಮೂವರು ಸೈನಿಕರಿಗೆ ವೀರಚಕ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ದೊರಕಿತ್ತು. ಇದೀಗ ಗೋರ್ಖಾ ರೈಫಲ್ಸ್ ತಂಡದ ಇನ್ನೊಂದು ಬೆಟಾಲಿಯನ್‍ನ ಜೂನಿಯರ್ ಕಮಿಷನ್ ಆಫಿಸರ್ ಹಾಗೂ 8ಮಂದಿ ಸೈನಿಕರು ಖಲುಬಾರ್ ನ ಕಠಿಣ ಹಾದಿಯಲ್ಲಿ ಪ್ರಯಾಣ ಮಾಡಿ ಭಾರತದ ಧ್ವಜ ನೆಟ್ಟು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.