ಮೂಡಿಗೆರೆ : ಹಲವು ವರ್ಷದಿಂದ ರಸ್ತೆಯಲ್ಲೆ ನಿಂತ ಲಾರಿ, ತೆರವುಗಳೊಳಿಸುವಂತೆ ಸಾರ್ವಜನಿಕರ ಆಗ್ರಹ…

1175
firstsuddi

ಮೂಡಿಗೆರೆ : ಬಣಕಲ್ ಠಾಣೆಯ ಮುಂಭಾಗದಲ್ಲಿ ಕೂಡಳ್ಳಿ ಬಂಕೇನಹಳ್ಳಿಗೆ ಸಾಗುವ ರಸ್ತೆಗೆ ಮರಳು ಲಾರಿಯೊಂದು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಕೂಡಳ್ಳಿ ಗ್ರಾಮಸ್ಥ ಯತೀಶ್ ಆರೋಪಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಬಣಕಲ್ ಪೋಲಿಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಲಾರಿಯನ್ನು ಕೂಡಳ್ಳಿ ಬಂಕೇನಹಳ್ಳಿ ಸಾಗುವ ರಸ್ತೆಗೆ ನಿಲ್ಲಿಸಲಾಗಿದೆ. ರಸ್ತೆಯ ಒಂದು ಬದಿಗೆ ಗ್ಯಾರೇಜ್‍ಗಳಿದ್ದು ರಿಪೇರಿಗೆಂದು ಬರುವ ವಾಹನಗಳು ಒಂದೆಡೆ ನಿಂತರೇ ವಾಹನಗಳು ಸಾಗುವುದು ಕಷ್ಟವಾಗಿದೆ. ಪೋಲಿಸ್ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದ್ದು ಲಾರಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.