ಬಿಜೆಪಿ ಪಕ್ಷದಿಂದ ನನಗೆ ಬಹಳ ಒತ್ತಡ ಬಂದಿದೆ : ಟಿ.ಡಿ. ರಾಜೇಗೌಡ…

571
firstsuddi

ಮಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಆಪರೇಶನ್ ಕಮಲದ ಬಗ್ಗೆ ಸ್ಪೋಟಕ ಮಾಹಿತಿಯನ್ನು ನೀಡಿದ್ದು, ಬಿಜೆಪಿ ಪಕ್ಷದಿಂದ ನನಗೆ ಬಹಳ ಒತ್ತಡ ಬಂದಿದೆ. ರಾಜಕಾರಣದಲ್ಲಿ ಹಣ ಹಾಗೂ ಅಧಿಕಾರ ಮುಖ್ಯವಲ್ಲ. ಜನರಿಗೆ ಸೇವೆ ಮಾಡುವುದು ಮುಖ್ಯ. ನಾವು ಜನರ ಸೇವೆ ಮಾಡಲು ಅಧಿಕಾರಕ್ಕೆ ಬಂದಿದ್ದೇವೆ ಹೊರತು ಹಣ ಹಾಗೂ ಅಧಿಕಾರಕ್ಕಾಗಿ ಬಂದಿಲ್ಲ. ಒಂದು ಪಕ್ಷದ ಪರವಾಗಿ ನಾವು ಚುನಾವಣೆಯಲ್ಲಿ ಭಾಗವಹಿಸಿ ಗೆದ್ದ ನಂತರ ಆ ಪಕ್ಷದ ಋಣ ತೀರಿಸಬೇಕಾಗಿರುವುದು ನಮ್ಮ ಕರ್ತವ್ಯ. ಏಕೆಂದರೆ ನಮ್ಮನ್ನು ನಂಬಿ ಬಹಳ ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು ನಮ್ಮನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತಾರೆ. ಅದು ಅಲ್ಲದೇ ನಾನು ಇದೇ ಮೊದಲ ಬಾರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಹೋಗಿದ್ದೇನೆ. ನನ್ನನ್ನು ಮಲೆನಾಡ ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷನಾಗಿಯೂ ಆಯ್ಕೆ ಮಾಡಿದ್ದು, ಅಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ರಾಜೀನಾಮೆ ಕುರಿತು ಶಾಸಕರು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದರು.