ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಆರ್.ಅಶೋಕ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಯಿಸಿದ್ದಾರೆ. ನಮಗೂ ಅತೃಪ್ತ ಶಾಸಕರ ರಾಜೀನಾಮೆ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮುಂಬೈನ ಹೋಟೆಲ್‍ನಲ್ಲಿ ಪಕ್ಷೇತರ ಶಾಸಕರನ್ನು ಭೇಟಿಯಾಗಿ ಬಿಜೆಪಿ ಬೆಂಬಲ ನೀಡುವಂತೆ ಕೇಳಿದ್ದೇನೆ. ಆದರೆ ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನೂ ನಾನು ಭೇಟಿಯಾಗಿಲ್ಲ. ಬೇರೆ ಯಾವಾ ಬೆಂಗಳೂರು ಶಾಸಕರನ್ನೂ ನಾನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ. ಅತೃಪ್ತ ಶಾಸಕರೇ ತಮ್ಮ ರಾಜೀನಾಮಗೆ ಉತ್ತರವನ್ನು ನೀಡಿದ್ದಾರೆ. ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನನ್ನ ಮನೆ ಬಾಗಿಲಿಗೂ ಯಾರೂ ಬಂದಿಲ್ಲ ಎಂದು ಹೇಳಿದ್ದಾರೆ.










