ಹೈದರಾಬಾದ್ : ಇಂದು ಬೆಳಿಗ್ಗೆ ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಹಲವು ತಾಂತ್ರಿಕ ದೋಷದಿಂದ ರದ್ದುಗೊಂಡಿದೆ. 2ಗಂಟೆ 51 ನಿಮಿಷಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆ ಆಗಬೇಕಿತ್ತು. ಆದರೆ ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ಉಡಾವಣೆಯಾಗಬೇಕಿದ್ದ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ಇಸ್ರೋ ಅಧಿಕಾರಿಗಳು ಸುದ್ದಿಗೋಷ್ಟಿ ಕರೆದು ಚಂದ್ರಯಾನ-2 ಉಡಾವಣಾ ವಾಹನದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದ್ದೇವೆ ಅದನ್ನು ನಾವು ನಿಗಧಿ ಪಡಿಸಿದ ಸಮಯದೊಳಗೆ ಸರಿ ಪಡಿಸಲು ಸಾಧ್ಯವಿಲ್ಲ. ಹೀಗಾಗಿ ಚಂದ್ರಯಾನ-2 ಉಡಾವಣೆಯನ್ನು ರದ್ದು ಮಾಡಲಾಗಿದ್ದು, ಶೀಘ್ರವೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ತಿಳಿಸಿದೆ.










