ಚಂದ್ರಯಾನ-2 ಉಡಾವಣೆ-ಬಾಹ್ಯಕಾಶಕ್ಕೆ ಚಿಮ್ಮಿದ ಬಾಹುಬಲಿ…

350
firstsuddi

ಶ್ರೀಹರಿಕೋಟ : ಭಾರತದ ಮಹತ್ವವಾದ ಚಂದ್ರಯಾನ-2 ಗಗನನೌಕೆ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಆಂದ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಮೂಲಕ ಇಸ್ರೋ ಚಂದ್ರಯಾನ-2ಅನ್ನು ಉಡಾವಣೆ ಮಾಡಿದೆ. ಜುಲೈ 15ರಂದು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಹಲವು ತಾಂತ್ರಿಕ ದೋಷದಿಂದ ರದ್ದಾಗಿತ್ತು. ಬಳಿಕ ಜುಲೈ 22ರಂದು ಉಡಾವಣೆ ಮಾಡುವುದಾಗಿ ಇಸ್ರೋ ತಿಳಿಸಿತ್ತು. ಅದರಂತೆ ಇಂದು ಮಧ್ಯಾಹ್ನ 2:43ಕ್ಕೆ ಯಶಸ್ವಿಯಾಗಿ ಚಂದ್ರಯಾನ-2ಅನ್ನು ಉಡಾವಣೆ ಮಾಡಲಾಗಿದೆ. ಚಂದ್ರಯಾನ-2 ಗಗನನೌಕೆ ಆಗಸ್ಟ್ 14ರಂದು ಚಂದ್ರನ ಕಕ್ಷೆಯತ್ತ ತಲುಪಲಿದ್ದು, ಸೆಪ್ಟೆಂಬರ್ 7 ರಂದು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲಿದೆ ಎಂದು ಇಸ್ರೋ ಮೂಲಗಳಿಂದ ತಿಳಿದು ಬಂದಿದೆ.