ಮೂಡಿಗೆರೆ : ಬ್ಯಾಂಕ್ ಆಫ್ ಬರೋಡ ಬಿಳಗುಳ ಶಾಖೆ ವತಿಯಿಂದ ಫೌಂಡೇಶನ್ ಡೇ ಆಚರಣೆ…

291
firstsuddi

ಮೂಡಿಗೆರೆ : ಬ್ಯಾಂಕ್ ಆಫ್ ಬರೋಡದ 112ನೇ ಫೌಂಡೇಶನ್ ಡೇಅನ್ನು ಬಿಳಗುಳ ಸರ್ಕಾರಿ ಶಾಲೆಯಲ್ಲಿ ಆಚರಿಸಲಾಯಿತು. ಬ್ಯಾಂಕ್ ಆಫ್ ಬರೋಡ ಶಾಖೆ ವತಿಯಿಂದ ಸರ್ಕಾರಿ ಶಾಲೆಗೆ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಬ್ಯಾಂಕ್‍ನ ವ್ಯವಸ್ಥಾಪಕ ಅಕ್ಷಯ್ ರಾಜ್ ಅವರು  ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದರಿಂದ ದೇಶಕ್ಕೆ ಒಳ್ಳೆಯ ಪ್ರಜೆಯಾಗಬಹುದು. ಮುಂದೆ ಚೆನ್ನಾಗಿ ಓದಿ ಸ್ನಾತಕೋತ್ತರ ಪದವಿ ಮಾಡುವವರಿಗೆ ನಮ್ಮ ಬ್ಯಾಂಕ್ ಮುಖಾಂತರ ಸಾಲ ಪಡೆದುಕೊಳ್ಳಬಹುದು ಎಂದು ಬ್ಯಾಂಕಿಗ್ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು. ಪಂಚಾಯಿತಿ ಸದಸ್ಯ ಪ್ರಶಾಂತ್ ಮಾತನಾಡಿ ಬ್ಯಾಂಕ್ ಕಡೆಯಿಂದ ಮಕ್ಕಳಿಗೆ ಉಪಯೋಗ ಆಗುವಂತಹ ಪೀಠೋಪಕರಣಗಳನ್ನು ಕೊಡುಗೆಯಾಗಿ ಕೊಟ್ಟಿದ್ದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಭಾಲಕೃಷ್ಣ, ಪಂಚಾಯಿತಿ ಸದಸ್ಯ ಮೊಹಿದ್ದೀನ್, ಅಖಿಲ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಇತರರು ಇದ್ದರು.