ಮೂಡಿಗೆರೆ : ವರ್ಲ್ಡ್ ಪ್ಯಾರಾ ಅಥ್ಲೆಟಿಕ್ಸ್‍ಗೆ ರಕ್ಷಿತಾರಾಜು ಆಯ್ಕೆ…

841
firstsuddi

ಕೊಟ್ಟಿಗೆಹಾರ: ಸ್ವಿಟ್ಜರ್ ಲ್ಯಾಂಡಿನಲ್ಲಿ ಆಗಸ್ಟ್ 1 ರಿಂದ ನಡೆಯಲಿರುವ ವರ್ಲ್ಡ್ ಪ್ಯಾರಾ ಅಥ್ಲೆಟಿಕ್ಸ್ ಜೂನಿಯರ್ ಚಾಂಪಿಯನ್‍ಶಿಪ್‍ಗೆ ಬಾಳೂರು ಸಮೀಪದ ಗುಡ್ನಳ್ಳಿಯ ರಕ್ಷಿತಾ ರಾಜು ಸೇರಿದಂತೆ ರಾಜ್ಯದ ಮೂವರು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿನಿಯಾಗಿರುವ ರಕ್ಷಿತಾ 1500ಮೀ ಹಾಗೂ 800 ಮೀ ಓಟದಲ್ಲಿ ಸ್ಪರ್ದಿಸಲಿದ್ದಾರೆ. ರಕ್ಷಿತಾ ಜೊತೆಗೆ ತುಮಕೂರಿನ ಶರತ್, ದಾವಣಗೆರೆಯ ರೇವತಿ ನಾಯಕ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿದ್ದು ಇದೇ 27 ರಂದು ಸ್ವಿಟ್ಜರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ತರಬೇತಿದಾರರಾಗಿ ರಾಹುಲ್ ಅವರು ರಕ್ಷಿತಾ ಅವರ ಜೊತೆಯಲ್ಲಿ ಸ್ವಿಟ್ಜರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ರಕ್ಷಿತಾಳಿಗೆ ಬಾಳೂರು ಹೋಬಳಿ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.