ಮೂಡಿಗೆರೆ : ನಳಂದಾ ಶಾಲೆಯಲ್ಲಿ ಸದ್ಭಾವನ ದಿನಾಚರಣೆ ಆಚರಿಸಲಾಯಿತು…

340
firstsuddi

ಮೂಡಿಗೆರೆ : ಇಂದು ನಳಂದಾ ಶಾಲೆಯಲ್ಲಿ ಸದ್ಭಾವನ ದಿನಾಚರಣೆ ಆಚರಿಸಲಾಯಿತು. ಎಲ್ಲಾ ಧರ್ಮ, ಭಾಷೆ ಹಾಗೂ ರಾಜ್ಯಗಳ ಜನರಲ್ಲಿ ಸೌಹಾರ್ಧತೆಯ ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು “ಸದ್ಭಾವನ ದಿನ”ವನ್ನು ಆಚರಿಸಲಾಗುತ್ತದೆ.

ಅದರಂತೆ ಇಂದು ನಳಂದಾ ಶಾಲೆಯಲ್ಲಿ ಆಚರಣೆ ಮಾಡಿ ಸದ್ಭಾವನ ದಿನವನ್ನು ಪ್ರತಿಜ್ಞೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಳಂದಾ ಶಾಲೆಯ ಮುಖ್ಯ ಉಪಧ್ಯಾಯರಾದ ಕನ್ನಿಂಗಾಲ್, ಇರ್ಫಾನ, ನಳಂದಾ ಮುಖ್ಯಸ್ಥರಾದ ಗಾಯತ್ರಿ, ಸುರೇಶ್, ಗಣೇಶ್ ಹಾಗೂ ಶಿಕ್ಷಕರಾದ ಡಾಲಿ, ಸ್ವಾತಿ, ಸವಿತ, ಅಕ್ಷತಾ, ಶಾಜಿಯಾ, ಅರ್ಪಿತ ಇದ್ದರು.