ಶ್ರೀನಗರದಲ್ಲಿ ವೃದ್ದ ವ್ಯಾಪಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು…

205
firstsuddi

ಶ್ರೀನಗರ : ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, 65 ವರ್ಷದ ವೃದ್ದರೋಬ್ಬರ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪ್ಯಾರಿಂಪೋರದಲ್ಲಿ ನಡೆದಿದೆ. ಪ್ಯಾರಿಂಪೋರದಲ್ಲಿ ವೃದ್ದ ವ್ಯಕ್ತಿಯು ತಡರಾತ್ರಿಯವರೆಗೂ ಅಂಗಡಿಯನ್ನು ತೆರೆದಿದ್ದ ಕಾರಣ ವೃದ್ದರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ದನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ವೃದ್ದ ಮೃತಪಟ್ಟಿದ್ದರು. ಉಗ್ರರ ಪತ್ತೆಗಾಗಿ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.