ಕ್ಯಾರೆಟ್ ಸೇವನೆಯಿಂದ ಪಡೆಯಬಹುದಾದದ ಲಾಭಗಳು…

1461
firstsuddi

ಕ್ಯಾರೆಟ್ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ತರಕಾರಿ. ಕ್ಯಾರೆಟ್ ಅನ್ನು ಕೆಲವರು ಹಸಿಯಾಗಿ ತಿನ್ನಲು ಇಷ್ಟಪಟ್ಟರೆ, ಇನ್ನು ಕೆಲವರು ಖಾದ್ಯಗಳ ರೂಪದಲ್ಲಿ ತಿನ್ನಲು ಇಷ್ಟಪಡುತ್ತಾರೆ.

ಕ್ಯಾರೆಟ್ ಎಂಬ ಹೆಸರು ಗ್ರೀಕ್ ಭಾಷೆಯ “ ಕರಟಾನ್” ಎಂಬ ಪದದಿಂದ ಬಂದಿದೆ. ಕ್ಯಾರೆಟ್ ಅನ್ನು ಕನ್ನಡದಲ್ಲಿ “ಗಜ್ಜರಿ” ಎಂದು ಕರೆಯುತ್ತಾರೆ. ಕ್ಯಾರೆಟ್ ನಲ್ಲಿ ವಿಟಮಿನ್ ‘ಎ’, ವಿಟಮಿನ್ ‘ಡಿ’, ವಿಟಮಿನ್ ‘ಇ’, ವಿಟಮಿನ್ ‘ಕೆ’, ಕ್ಯಾಲ್ಸಿಯಂ, ಪೊಟಾಶಿಯಂ, ನಾರಿನಾಂಶ ಇದೆ. ದಿನಕ್ಕೆ ಒಂದು ಕ್ಯಾರೆಟ್ ಅಥವಾ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕ್ಯಾರೆಟ್ ಸೇವನೆ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕ್ಯಾರೆಟ್ ಸೇವನೆಯಿಂದ ಪಡೆಯಬಹುದಾದದ ಲಾಭಗಳು
• ಕ್ಯಾರೆಟ್ ಸೇವನೆಯಿಂದ ಹೃದಯ ಸಂಬಂಧೀ ಸಮಸ್ಯೆಗಳನ್ನು ದೂರವಿಡಬಹುದು.
• ಕಣ್ಣಿನ ಆರೋಗ್ಯ ಮತ್ತು ಕಣ್ಣಿನ ದೃಷ್ಟಿ ಕ್ಯಾರೆಟ್ ಸೇವನೆಯಿಂದ ವೃದ್ಧಿಯಾಗುತ್ತದೆ.
• ಕ್ಯಾರೆಟ್ ಸೇವನೆಯಿಂದ ಕ್ಯಾನ್ಸರ್ ಸಂಬಂಧಿಸುವ ಸಾದ್ಯತೆ ಕಡಿಮೆ.
• ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶವನ್ನು ಕ್ಯಾರೆಟ್ ಒಳಗೊಂಡಿದೆ.
• ಆರೋಗ್ಯ ತ್ವಚೆಗೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕ್ಯಾರೆಟ್ ಸೇವನೆ ಸಹಕಾರಿ.
• ಕ್ಯಾರೆಟ್ ಸೇವನೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಹಕಾಯಾಗಿದೆ.
• ಡಯೇಟ್ ಮಾಡುವವರಿಗೆ ಕ್ಯಾರೆಟ್ ಜ್ಯೂಸ್ ಸಹಕಾರಿಯಾಗಿದೆ. ಕ್ಯಾರೆಟ್ ಜ್ಯೂಸ್ ಸೇವನೆಯಿಂದ ಪದೆ ಪದೆ ಹಸಿವಾಗುವುದನ್ನು ತಡೆಯುತ್ತದೆ.
• ಕ್ಯಾರೆಟ್ ಜ್ಯೂಸ್ ದೇಹದ ತೂಕ ಹೆಚ್ಚಾಗದಂತೆ ತಡೆಯುತ್ತದೆ.
• ಕ್ಯಾರೆಟ್ ಜ್ಯೂಸ್ ನಲ್ಲಿ ಆಯಂಟಿ ಆಕ್ಸಿಡೆಂಟ್ ಮತ್ತು ಪೊಟಾಶಿಯಂ ಇದ್ದು, ಇದು ಕೋಶಗಳ ಪುನರ್ ಉತ್ಪತ್ತಿ ಮಾಡಿ ಚರ್ಮ, ಕೂದಲಿಗೆ ನೈಸರ್ಗಿಕ ಕಾಂತಿ ಪಡೆಯಲು ನೆರವಾಗುತ್ತದೆ.
• ಹಸಿ ಕ್ಯಾರೆಟ್ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ.
• ಶರೀರವನ್ನು ನಿರ್ಜಲೀಕರಣವಾಗದಂತೆ ಕಾಪಾಡುತ್ತದೆ.
• ಅನಿಮಿಯಾ ಕಾಯಿಲೆ ಗುಣಪಡಿಸಲು ಇದು ಸಹಕಾರಿಯಾಗಿದೆ.
• ಕ್ಯಾರೆಟ್ ಸೇವನೆಯಿಂದ ದೇಹದಲ್ಲಿನ ಅಧಿಕ ಬೊಜ್ಜು ಕಡಿಮೆಯಾಗಿಸಬಹುದು.