ಮೂಡಿಗೆರೆ : ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ತಾಲ್ಲೂಕಿನ ವಿವಿಧ ಭಾಗಗಳ 60ಕ್ಕೂ ಹೆಚ್ಚು ನೆರೆ ಸಂತ್ರಸ್ಥರಿಗೆ ಅಗತ್ಯ ವಸ್ತುಗಳ ನೆರವು ನೀಡಲಾಯಿತು. ಬಿನ್ನಾಡಿ, ಕೊಟ್ಟಿಗೆಹಾರ, ಮಾರಕಲ್, ಜಾವಳಿ ಹಾಗೂ ಹಳ್ಳಿಕೆರೆ ವ್ಯಾಪ್ತಿಯಲ್ಲಿ ಅತಿಯಾದ ಮಳೆಯಿಂದ ಕೂಲಿ ಕೆಲಸವೂ ಇಲ್ಲದೇ ಸಂಕಷ್ಟದಲ್ಲಿದ್ದ 60ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಇಲ್ಲಿನ ಬಿಳಗುಳ ಬಡಾವಣೆಯಲ್ಲಿರುವ ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಕಛೇರಿಯಲ್ಲಿ ದಿನಬಳಕೆ ಮತ್ತು ಊಟೋಪಚಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಎಸ್‍ಎಸ್ ಸಂಸ್ಥೆಯ ಸಿಒಒ ರವರಾದ ಶ್ರೀ ಪಂಚಾಕ್ಷರಿ ಎಸ್. ರವರು ಮಾತನಾಡಿ, ಅತಿಯಾದ ಮಳೆಯ ಕಾರಣದಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ, ಹಾಗೂ ದಿನಗೂಲಿ ಕೆಲಸ ಸಿಗುತ್ತಿಲ್ಲದಿರುವುದು ಸಂಸ್ಥೆಯ ಗಮನಕ್ಕೆ ಬಂದಿರುತ್ತದೆ. ಸಂಸ್ಥೆಯ ಚೌಕಟ್ಟಿನ ಒಳಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸುಮಾರು 6000 ನೆರೆ ಸಂತ್ರಸ್ಥ ಜನರಿಗೆ ಪರಿಹಾರ ಕಾರ್ಯವನ್ನು ನಡೆಸಲಾಗುತ್ತಿದ್ದು, ಮೂಡಿಗೆರೆ ಕ್ಷೇತ್ರ ಕಛೇರಿ ವ್ಯಾಪ್ತಿಯಲ್ಲಿಯೂ ಸಹ ಪರಿಹಾರ ಕಾರ್ಯವನ್ನು ನಡೆಸಲಾಗುತ್ತಿದೆ. ಬಡ ಕುಟುಂಬಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಸಿಇಒ ರವರಾದ ಶ್ರೀ ಕುಮಾರ್ ಎಸ್. ರವರು ಮಾತನಾಡಿ, ಮೂಡಿಗೆರೆ ವ್ಯಾಪ್ತಿಯ ವಿವಿಧ ಹಳ್ಳಿಗಳ ಬಡ ಕುಟುಂಬಗಳಿಗೆ ಈ ಪರಿಹಾರ ಕಾರ್ಯವನ್ನು ನಡೆಸಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಲಯ ಲೆಕ್ಕ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಎಸ್.ಎಸ್, ವಲಯ ಲೆಕ್ಕ ಸಹಾಯಕ ವ್ಯವಸ್ಥಾಪಕರಾದ ಶ್ರೀ ಚೌಡನಾಯಕ, ಮೂಡಿಗೆರೆ ಕ್ಷೇತ್ರ ಕಛೇರಿಯ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಕಿರಣ್ ಎಂ.ವೈ, ಆಲೂರು ಕ್ಷೇತ್ರ ಕಛೇರಿಯ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಹರೀಶ ಸಿ. ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ನೆರೆ ಸಂತ್ರಸ್ಥರಿಗೆ ಅಗತ್ಯ ವಸ್ತುಗಳ ನೆರವು…










