ಮೂಡಿಗೆರೆ : ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ಮೂಡಿಗೆರೆ ಕ್ಷೇತ್ರ ಸಮಿತಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ…

386
firstsuddi

ಬಣಕಲ್ : ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಸಂಘಟಿತ ಟೈಲರ್ಸ್ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಎಸೋಸಿಯೇಷನ್‍ನ ಜಿಲ್ಲಾ ಅಧ್ಯಕ್ಷರಾದ ಸಯ್ಯಾದ್ ರೆಹಮಾನ್ ಹೇಳಿದರು.
ಮೂಡಿಗೆರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ಮೂಡಿಗೆರೆ ಕ್ಷೇತ್ರ ಸಮಿತಿಯಿಂದ ನಡೆದ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂಘಟಿತ ಹೋರಾಟದ ಫಲವಾಗಿ ಇಂದು ಸರ್ಕಾರ ನಮ್ಮನ್ನು ಹೊಲಿಗೆ ಕಾರ್ಮಿಕ ಎಂದು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಕಾರ್ಮಿಕ ಇಲಾಖೆಯೂ ಜಾರಿಗೆ ತಂದಿರುವ ಡಾ.ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ವರದಾನವಾಗಿದ್ದು ಸೌಲಭ್ಯಗಳನ್ನು ಪಡೆದು ಭದ್ರತೆಯ ಬದುಕನ್ನು ಸಾಗಿಸಬಹುದು ಎಂದರು.
ಮೂಡಿಗೆರೆ ಕ್ಷೇತ್ರ ಸಮಿತಿ ತಾಲ್ಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಹೊಲಿಗೆ ಕಾರ್ಮಿಕರಿಗೆ ಭವಿಷ್ಯ ನಿಧಿ, ಮಾಸಾಶಾನ, ಆರೋಗ್ಯವಿಮೆ, ವಿಧವಾವೇತನಾ ಮುಂತಾದ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ಶಾಸಕರ ಮೂಲಕ ಸಂಘಟಿತವಾಗಿ ಮನವಿ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಹೊಲಿಗೆ ಕಾರ್ಮಿಕರಿಗೆ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ಮೂಡಿಗೆರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಕೀರ್ತಿ, ಖಜಾಂಚಿ ಗೋಪಾಲಶೆಟ್ಟಿ, ಪಧಾಧಿಕಾರಿಗಳಾದ ಗಿರೀಶ್, ಉದಯ, ಗೋವಿಂದ, ಯೋಗಿತಾ, ಸುಜಾತ, ಅಕ್ಬರ್, ರಾಜೇಶ್, ಖಲೇಜ, ಸಾವಿತ್ರಿ ಮುಂತಾದವರು ಇದ್ದರು.