ಚಿಕ್ಕಮಗಳೂರು : ನಾನು ಸಿದ್ದರಾಮಯ್ಯ ಅವರು ದಡ್ಡ ಎಂದು ಹೇಳುವಷ್ಟು ದೊಡ್ಡವನಲ್ಲ : ಸಿ.ಟಿ.ರವಿ

371

ಚಿಕ್ಕಮಗಳೂರು : ಸಿದ್ದರಾಮಯ್ಯನವರೇ…. ನಿಮಗೆ ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಹೋಗಿ ಪರದಾಡಿ ಗೆಲ್ಲುವ ಸ್ಥಿತಿ ಯಾಕೆ ಬಂತು? ಎಂದು ವ್ಯಂಗ್ಯವಾಡಿರುವ ಸಚಿವ ಸಿ.ಟಿ.ರವಿ ಅವರು ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಸೋಲನ್ನು ಕೆದಕುವ ಮೂಲಕ ಅವರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಇವರು, ನಾನು ಸಿದ್ದರಾಯ್ಯನವರನ್ನು ದಡ್ಡ ಎನ್ನುವುದಿಲ್ಲ. ದಡ್ಡ ಎಂದು ಹೇಳುವಷ್ಟು ದೊಡ್ಡವನೂ ನಾನಲ್ಲ ಎಂದರು. ಜಗದಲ್ಲಿ ಮೂರ್ಖರು ಮಾತ್ರ ನಾನೊಬ್ಬನೆ ಬುದ್ಧಿವಂತ ಅಂದುಕೊಳ್ಳುತ್ತಾರೆ.. ಜನ ನಿಜವಾದ ಬುದ್ಧಿವಂತನನ್ನ ಬುದ್ಧಿವಂತ ಅಂತಾರೆ. ಸಿದ್ದರಾಮಯ್ಯ ಅವರು ಯಾವ ಸಾಲಿಗೆ ಸೇರ್ತಾರೆ ಅನ್ನುವುದನ್ನು ಜನಕ್ಕೆ ಬಿಡ್ತೀನಿ ಎಂದರು. ಜನರ ಪ್ರೀತಿ ಇಲ್ಲದಿದ್ದರೆ ಜನ ನನ್ನನ್ನು ನಾಲ್ಕು ಬಾರಿ ಚಿಕ್ಕಮಗಳೂರಿನಲ್ಲಿ ಗೆಲ್ಲಿಸುತ್ತಿರಲಿಲ್ಲ ಎಂದು ಅವರ ಸೋಲಿಗೆ ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿಯಲ್ಲಿ ಜನ ಯಾಕೆ ಸೋಲಿಸಿದರು ಎಂಬುವುದನ್ನು ಅರ್ಥೈಸಿಕೊಂಡರೆ ಅವರು ಈ ರೀತಿಯ ಮಾತನ್ನು ಮುಂದುವರೆಸಲ್ಲ ಎಂದ ಇವರು, ಅವರ ಕ್ಷೇತ್ರದ ಜನ ಸಿದ್ದರಾಮಯ್ಯ ಅವರನ್ನು ಯಾಕೆ ಸೋಲಿಸಿದ್ದಾರೆ, ಸಿ.ಟಿ.ರವಿ ಯಾಕೆ ಗೆದ್ದಿದ್ದಾರೆ ಅನ್ನುವುದು ನಿಮಗೆ ಅರ್ಥವಾಗುತ್ತೆ ಎಂದು ಪರೋಕ್ಷವಾಗಿ ನಿಮಗೆ ಜನಪ್ರೀತಿ ಇಲ್ಲ, ಅದಕ್ಕೆ ಸೋತಿದ್ದೀರಿ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ನಿನ್ನೆ ಕಡೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿ.ಟಿ.ರವಿಗೆ ಏನೂ ಗೊತ್ತಿಲ್ಲ. ಅವನನ್ನೇ ಗೆಲ್ಲಿಸುತ್ತೀರಾ… ನಾವೇನ್ ಮಾಡೋದು… ಇನ್ಮುಂದೆ ಸ್ವಲ್ಪ ಹುಷಾರಾಗಿರಿ ಎಂದಿದ್ದರು.