ಮೂಡಿಗೆರೆ : ಇಲ್ಲಿಗೆ ಯಾರು ಜಿಲ್ಲಾ ಉಸ್ತುವಾರಿ ಸಚಿವರು ಎಂದು ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ…

728
firstsuddi

ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾಗಿರುವ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಲ್ಲಿಗೆ ಯಾರು ಜಿಲ್ಲಾ ಉಸ್ತುವಾರಿ ಸಚಿವರು ಎಂದು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಕೇಳಿದ್ದು, ಅವರು ಸಿ.ಟಿ. ರವಿ ಎಂದಿದ್ದು, ಹೌದ, ಎಂದ ಸಿದ್ದರಾಮಯ್ಯ ಅವರು ಸಿ.ಟಿ. ರವಿ ಅವನು ಈ ಕಡೆ ಬಂದೇ ಇಲ್ಲ. ಸ್ಥಳೀಯ ಶಾಸಕರು ಬಂದಿಲ್ಲ. ಸಂಸದರು ಹಾಗೂ ಮಂತ್ರಿ ಯಾರೂ ಬಂದಿಲ್ಲ. ನೋಡಿ, ಜನ ಇಂತವರಿಗೆ ಓಟ್ ಹಾಕುತ್ತಾರೆ. ಹಳ್ಳಿಗಳಿಗೆ ಹೋಗದವರಿಗೆ, ಜನರ ಸಮಸ್ಯೆ ಆಲಿಸದವರಿಗೆ ಓಟ್ ಹಾಕುತ್ತಾರೆ. ಇದು ನಮ್ಮ ಹಾಗೂ ನಿಮ್ಮೆಲ್ಲರ ದುರ್ದೈವ ಎಂದರು. ರೈತರಿಗೆ ಸಾಂತ್ವನ ಹೇಳದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲೇ ಸಿ.ಟಿ. ರವಿ ಅವರನ್ನು ಲೇವಡಿ ಮಾಡಿದರು.