ಮೂಡಿಗೆರೆ : ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಕಳಸ ಸಮೀಪದ ಎಸ್.ಕೆ. ಮೇಗಲ್ ಗ್ರಾಮದ ರೈತ ಚಂದ್ರೇಗೌಡ ಹಾಗೂ ಕಾರ್ಗದ್ದೆ ಗ್ರಾಮದ ಚನ್ನಪ್ಪಗೌಡರ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ ಇಬ್ಬರ ಕುಟುಂಬಕ್ಕೂ 2ಲಕ್ಷ ರೂ ಪರಿಹಾರ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮೂಡಿಗೆರೆ ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ಮಾಜಿ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಜೆಡಿಎಸ್ ಮುಖಂಡರಾದ ಹೆಚ್,ಹೆಚ್, ದೇವರಾಜ್, ಯುವ ಮುಖಂಡರಾದ ಬಾಳೂರು ಆದರ್ಶ್, ರಫೀಕ್ ಇದ್ದರು.










