ಅಯೋಧ್ಯೆ ವಿಚಾರಣೆ ವೇಳೆ ಸುಪೀಂನಲ್ಲಿ ಹೈಡ್ರಾಮ, ಹಿಂದೂ ಮಹಾಸಭಾ ಸಲ್ಲಿಸಿದ್ದ ನಕ್ಷೆಯನ್ನು ಹರಿದುಹಾಕಿದ ಮುಸ್ಲಿಂ ಪರ ವಕೀಲ…

367
firstsuddi

ನವದೆಹಲಿ : ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ ಇಂದು 40ನೇ ದಿನದ ಮತ್ತು ಅಂತಿಮ ದಿನದ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಸುಪೀಂ ಕೋರ್ಟ್ನಲ್ಲಿ ಹೈಡ್ರಾಮವೇ ನಡೆದಿದೆ. ಅಯೋಧ್ಯೆ ವಿಚಾರಣೆಯ ಅಂತಿಮ ದಿನವಾದ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಹಿಂದೂ ಮಹಾಸಭಾ ನೀಡಿದ್ದ ನಕ್ಷೆ ಹಾಗೂ ದಾಖಲೆಗಳನ್ನು ಮುಸ್ಲಿಂ ಪರ ವಕೀಲರಾದ ರಾಜೀವ್ ಧವನ್ ಅವರು ಹರಿದುಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ರಾಜೀವ್ ಧವನ್ ಅವರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರು ಅಯೋದ್ಯೆ ವಿಚಾರಣೆ ಇಂದು ಸಂಜೆ 5ಗಂಟೆ ಮುಕ್ತಾಯವಾಗಬೇಕು. ಇದು ಹೀಗೆ ಮುಂದುವರೆದರೆ ಕೋರ್ಟ್ ಹಾಲ್‍ನಿಂದ ಹೊರನಡೆಯುವುದಾಗಿ ಎಚ್ಚರಿಸಿದರು.